Muslim relatives who visited Sri Math ಶ್ರೀಮಠಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು

WhatsApp Group Join Now
Telegram Group Join Now
Instagram Group Join Now
Spread the love

Muslim relatives who visited Sri Math ಶ್ರೀಮಠಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು

ಶ್ರೀಮಠಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು

ಇಳಕಲ್ : ಇಲ್ಲಿನ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಮುಸ್ಲಿಂ ಬಾಂಧವರು ಶ್ರೀಮಠಕ್ಕೆ ಭೇಟಿ ನೀಡಿದರು.

ಮುರ್ತುಜಾ ಖಾದ್ರಿ ದರ್ಗಾದ ಧರ್ಮಗುರು ಫೈಸಲ್ ಪಾಷಾ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ ,

ಲಿಮ್ರಾ ಅಧ್ಯಕ್ಷ ಅಬ್ದುಲರಜಾಕ ತಟಗಾರ ನೇತೃತ್ವದಲ್ಲಿ ಹಲವಾರು ಧುರೀಣರು ಭೇಟಿ ನೀಡಿ ಲಿಂ. ಡಾ ಮಹಾಂತಶ್ರೀಗಳನ್ನು ಸ್ಮರಿಸಿದರು.

ರಂಜಾನ್ ತಿಂಗಳಲ್ಲಿ ಶ್ರೀಮಠಕ್ಕೆ ಮುಸ್ಲಿಂ ಜನರನ್ನು ಕರೆಸಿಕೊಂಡು ಅವರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದನ್ನು ಸಮಯ ಆದಾಗ

ಮಠದಲ್ಲಿಯೇ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಶ್ರೀಗಳ ಹೃದಯ ವೈಶಾಲ್ಯ ದೊಡ್ಡದು ಎಂದು ಬಣ್ಣಿಸಲಾಯಿತು.

ಗುರುಮಹಾಂತಶ್ರೀಗಳು ಸಹ ಮುರ್ತುಜಾ ಖಾದ್ರಿ ದರ್ಗಾ ಉರುಸಿನ ಸಮಯದಲ್ಲಿ ಮಠಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿ ಉರುಸಿನ

ಸಂಭ್ರಮದಲ್ಲಿ ಭಾಗವಹಿಸಿದ್ದು ಇವರೂ ಸಹ ಹಿರಿಯ ಶ್ರೀಗಳ ಸಾಲಿನಲ್ಲಿಯೇ ಸಾಗುತ್ತಿದ್ದಾರೆ ಎಂದು ಉಸ್ಮಾನಗಣಿ ಹೇಳಿದರು.

ಬಂದ ಎಲ್ಲಾ ಬಾಂಧವರಿಗೆ ಮಠದಲ್ಲಿ ಆತಿಥ್ಯವನ್ನು ನೀಡಿ ಗೌರವಿಸಲಾಯಿತು.

ಈ ಸಮಯದಲ್ಲಿ ಶಿರೂರ ನಿಸರ್ಗ ಕೇಂದ್ರದ ಡಾ ಬಸವಲಿಂಗ ಸ್ವಾಮಿಜಿ ಉಪಸ್ಥಿತರಿದ್ದರು


Spread the love

Leave a Comment

error: Content is protected !!