ನಾಗೂರ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ: ಶ್ರೀಗಳಿಂದ ಸದ್ಭಾವನ ಪಾದಯಾತ್ರೆ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ನಾಗೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಶುಕ್ರವಾರದಂದು ಮಧ್ಯಾಹ್ನ ೪ ಗಂಟೆಗೆ ಗ್ರಾಮದಲ್ಲಿ ಸದ್ಭಾವನ ಪಾದಯಾತ್ರೆ ನಡೆಸಿದರು.
ಗ್ರಾಮದ ಅನ್ನದಾನೇಶ್ವರ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಂಚರಿಸಿ ಮಠದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು.ಆರು ಜನ ಪೂಜ್ಯರು ಇದರಲ್ಲಿ ಭಾಗವಹಿಸಿದೆ ಎಲ್ಲಾ ಮಹಿಳೆಯರು ಆರತಿಯೊಂದಿಗೆ ಪೂಜ್ಯರನ್ನು ಗ್ರಾಮದ ಜನರು ಬರಮಾಡಿಕೊಂಡರು.