ಗಧೆ ಎತ್ತಿ ನಾಟಕ ಪ್ರದರ್ಶನ ಉದ್ಘಾಟಿಸಿದ ನಂಜಯ್ಯನಮಠ
ಇಳಕಲ್ : ಇಲ್ಲಿನ ನಾಟ್ಯರಾಣಿ ಕಲಾ ಸಂಘದ ೧೮ ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ‘ ದನ ಕಾಯೋರ ಆಟ’ ನಾಟಕ ಪ್ರದರ್ಶನವನ್ನು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಶಾಸಕ ಎಸ್ ಜಿ ನಂಜಯ್ಯನಮಠ ಗಧೆಯನ್ನು ಎತ್ತುವ ಮೂಲಕ ಉದ್ಘಾಟಿಸಿದರು.
ನಾಟಕ ಉದ್ಘಾಟಿಸಿ ಮಾತನಾಡಿದ ಅವರು ಕಿರುತೆರೆ ಮತ್ತು ಮೊಬೈಲ್ ಹಾವಳಿಯಲ್ಲಿ ನಾಟಕ ರಂಗ ಬಡವಾಗುತ್ತಿದೆ ಅದರ ಪುನರುಜ್ಜೀವನಕ್ಕಾಗಿ ಎಲ್ಲಾ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಎಲ್ ಬಿ ಶೇಖ ಮಾಸ್ಟರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಶ್ವನಾಥ ವಂಶಾಕೃತಮಠ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ ನಾಟಕ ಅಕಾಡೆಮಿಯ ಸದಸ್ಯ ಕೆ ಎ ಬನ್ನಟ್ಟಿ, ಕೆಬಿಆರ್ ಡ್ರಾಮಾ ಕಂಪನಿ ಮಾಲಿಕ ಶ್ರೀಕಂಠೇಶ ಚಿಂದೋಡಿ, ತಾಳಿಕೋಟಿಯ ಸಿದ್ದು ನಾಲತವಾಡ, ಮಲ್ಲಯ್ಯ ಕೋಮಾರಿ ಇವರನ್ನು ಸತ್ಕರಿಸಲಾಯಿತು. ಸಾನಿಧ್ಯವನ್ನು ಗುರುಮಹಾಂತಶ್ರೀಗಳು ಡಾ ಬಸವಲಿಂಗ ಸ್ವಾಮಿಗಳು , ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮವನ್ನು ನಾಟ್ಯರಾಣಿ ಕಲಾ ಸಂಘದ ಅಧ್ಯಕ್ಷೆ ಉಮಾರಾಣಿ ಬಾರಿಗಿಡದ ನಡೆಸಿಕೊಟ್ಟರು.