Newspapers ಪತ್ರಿಕೆಗಳು ಜ್ಞಾನದ ಭಂಡಾರ: ಗುರುಮಹಾಂತಶ್ರೀಗಳು
ಇಳಕಲ್ : ದಿನನಿತ್ಯ ಪತ್ರಿಕೆಗಳನ್ನು ಓದುವದರಿಂದ ಓದುಗರಿಗೆ ಸಮಗ್ರ ಮಾಹಿತಿ ದೊರಕುತ್ತಿದ್ದು ಅವುಗಳು ಜ್ಞಾನದ ಭಂಡಾರ ಎಂದು ಶ್ರೀಮಠದ ಗುರುಮಹಾಂತಶ್ರೀಗಳು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ದಾಸೋಹ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಾಮಾಜಿಕ ಜಾಲತಾಣದ ಹಾವಳಿಯಿಂದ ಪತ್ರಿಕೆಗಳಿಗೆ ಅಲ್ಪ ಸ್ವಲ್ಪ ತೊಂದರೆಯಾಗಿದ್ದರೂ ಅವುಗಳು ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿವೆ ಎಂದು ಹೇಳಿದರು.
ಅತಿಥಿಗಳಾಗಿ ಗ್ರೇಡ್ ಟು ತಹಸೀಲ್ದಾರ ಈಶ್ವರ ಗಡ್ಡಿ ಮಾತನಾಡಿ ನಾಲ್ಕನೇಯ ಅಂಗವಾಗಿ ಪತ್ರಿಕೆಗಳು ಕೆಲಸ ಮಾಡುತ್ತಲಿವೆ ಎಂದು ಹೇಳಿದರು.
ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ ಸರಕಾರಗಳನ್ನು ಬುಡಮೇಲು ಮಾಡುವ ಶಕ್ತಿ ಪತ್ರಿಕೆ ಮತ್ತು ಪತ್ರಕರ್ತರ ಕೈಯಲ್ಲಿ ಇದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಪತ್ರಕರ್ತರಾದ ಬಿ ಬಾಬು ಸಜ್ಜನರಾಜ ಮೆಹತಾ ಮತ್ತು ಎಜೆಂಟರಾದ ಅಬ್ದುಲಸಾಬ ಮುಲ್ಲಾ ಇವರನ್ನು ಸತ್ಕರಿಸಲಾಯಿತು.ವಿಜಯ ಪಲ್ಲೇದ ಪ್ರಾರ್ಥಿಸಿದರು ಶರಣಗೌಡ ಕಂದಕೂರ ಸ್ವಾಗತಿಸಿ ವಂದಿಸಿದರು.