ಒಂಬತ್ತು ವರ್ಷದ ರಣವೀರ್ ಭಾರತಿ ಒಂದು ದಿನದ ಮಟ್ಟಿಗೆ “IPS ಅಧಿಕಾರಿ”
ವಾರಣಾಸಿ; ಒಂಬತ್ತು ವರ್ಷದ ರಣವೀರ್ ಭಾರತಿ ಪ್ರಸ್ತುತ ಉತ್ತರ ಪ್ರದೇಶದ ಮಹಾಮನಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೆದುಳಿನ ಗೆಡ್ಡೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಒಂದು ದಿನದ ಮಟ್ಟಿಗೆ “ಐಪಿಎಸ್ ಅಧಿಕಾರಿ” ಆಗುವ ಮೂಲಕ ತನ್ನ ಕನಸನ್ನು ನನಸು ಮಾಡಿದ ಪೊಲೀಸ ಇಲಾಖೆ ವಾರಣಾಸಿಯ ಹೃದಯಸ್ಪರ್ಶಿ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್.
ರಣವೀರ್ ಅವರ ಬಯಕೆಯ ನೆರವೇರಿಸಿದ ವಾರಣಾಸಿಯ ಎಡಿಜಿ ವಲಯವು ತಮ್ಮ ಅಧಿಕೃತ ಎಕ್ಸ್ (ಟ್ವಿಟರ) ಖಾತೆಯಲ್ಲಿ ಹಂಚಿಕೊಂಡಿದೆ. “ವಾರಣಾಸಿಯ ಮಹಾಮನಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೆದುಳಿನ ಗಡ್ಡೆಯೊಂದಿಗೆ ಹೋರಾಡುತ್ತಿರುವ 9 ವರ್ಷದ ರಣವೀರ್ ಭಾರತಿ, ಐಪಿಎಸ್ ಅಧಿಕಾರಿಯಾಗಲು ಬಯಸಿದ್ದ. ಈ ಧೈರ್ಯಶಾಲಿ ಮಗುವಿನ ಕನಸನ್ನು ನನಸಾಗಿಸಲು ನಮಗೆ ಗೌರವವಿದೆ #adgzonevaranasi “ಎಂದು ಟ್ವೀಟ್ ಮಾಡಿದ್ದಾರೆ.
ರಣವೀರ್ ಖಾಕಿ ಸಮವಸ್ತ್ರವನ್ನು ಧರಿಸಿ ಆಫೀಸ್ ಕ್ಯಾಬಿನ್ನಲ್ಲಿ ಕುಳಿತಿರುವುದು, ವೀಡಿಯೊದಲ್ಲಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದನ್ನು ಮತ್ತು ಕೈಕುಲುಕುವ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಪೋಲಿಸ್ ಇಲಾಖೆಗೆ ಹೃತ್ಪೂರ್ವಕ ಅಭಿನಂದನೆಗಳು ವ್ಯಕ್ತಪಡಿಸಿದ್ದಾರೆ.