ಸಂಭ್ರಮದಿಂದ ನಡೆದ ನಿಶಾನೇಶ್ವರ ರಥೋತ್ಸವ
ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ನಿಶಾನೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರದಂದು ಸಂಜೆ ಸಡಗರ ಸಂಭ್ರಮದಿAದ ನಡೆಯಿತು.
ಚಿಕ್ಕ ಓತಗೇರಿ ಗ್ರಾಮದ ಜನರಲ್ಲದೇ ಪಕ್ಕದ ಗ್ರಾಮಗಳಾದ ಹಿರೇಓತಗೇರಿ ,ಗೋನಾಳ ಎಸ್ ಕೆ, ವಜ್ಜಲ ಮರಟಗೇರಿ ಕಂದಗಲ್ಲ ಸೋಮಲಾಪೂರ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರವಿವಾರದಂದು ನಡೆದ ಕಡುಬಿನ ಕಾಳಗ ಕಾರ್ಯಕ್ರಮಕ್ಕೆ ಕೊಪ್ಪಳ ಮಠದ ಗವಿಸಿದ್ದ ಸ್ವಾಮಿಗಳು ಆಗಮಿಸಿ ಭಕ್ತರನ್ನು ಹರಿಸಿ ಮಾತನಾಡಿ ನಮ್ಮ ಕೊಪ್ಪಳ ಜಾತ್ರೆಯಲ್ಲಿ ಚಿಕ್ಕ ಓತಗೇರಿ ಗ್ರಾಮದ ಜನರು ಮಿರ್ಚಿ ಬಜಿ ಮಾಡಿ ಸಲ್ಲಿಸುವ ಸೇವೆ ಅತ್ಯಂತ ದೊಡ್ಡದು ಎಂದು ಬಣ್ಣಿಸಿದರು.