ಮತ್ತೆ ನೆಟ್ಟಿಗರ ಕೋಪಕ್ಕೆ ಗುರಿಯಾದ ನಿವೇದಿತಾ ಗೌಡ. ಯಾಕೆ ಗೊತ್ತಾ
ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯದಿಂದ ದೂರವಾಗಿ ತಿಂಗಳು ಕಳೆದಿದೆ. ಸ್ವತಃ ದಂಪತಿಯೇ ದೂರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಇಬ್ಬರ ಮೇಲಿನ ಕೋಪವನ್ನು ಮಾತ್ರ ಮರೆಯುತ್ತಿಲ್ಲ. ಸಿನಿಮಾ ಪಾತ್ರವೊಂದಕ್ಕೆ ಮೇಕಪ್ ಮಾಡಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ‘ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ’ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.
ಜನರ ಹೊಗಳಿಕೆ, ತೆಗಳಿಕೆಗೆ ತಲೆ ಕೆಡಿಸಿಕೊಳ್ಳದ ಜೋಡಿ ದಾಂಪತ್ಯವನ್ನು ಮುಂದುವರೆಸಿದ್ದರು. ಆದರೆ, ಕಳೆದೊಂದು ತಿಂಗಳ ಹಿಂದೆ ಅದೇನಾಯ್ತೋ ಗೊತ್ತಿಲ್ಲ, ಇಬ್ಬರೂ ಮಾಧ್ಯಮಗಳ ಮುಂದೆ ಹಾಜರಾಗಿ ತಾವು ಡಿವೋರ್ಸ್ ಪಡೆದುಕೊಂಡಿದ್ದೇವೆ ಎಂದು ಹೇಳಿ ಹೋದರು. ಕೈ ಕೈ ಹಿಡಿದುಕೊಂಡು ಕೋರ್ಟಿಗೆ ಬಂದು, ಡಿವೋರ್ಸ್ ಪಡೆದು ಕೈ ಕೈ ಹಿಡಿದುಕೊಂಡು ಕಾರಿನಲ್ಲಿ ಕುಳಿರು ತಮ್ಮ ತಮ್ಮ ಮನೆಗೆ ಹೋದರು. ಈಗ ಅವರಿಬ್ಬರು ದೂರವಾಗಿ ಒಂದು ಮಾಸವೇ ಕಳೆದಿದೆ. ಈಗ ಇನ್ನರೂ ತಮ್ಮ ಸಿನಿಮಾ ಕಾರ್ಯಗಳಲ್ಲಿ ಬ್ಯೂಸಿ ಆಗಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಿವೇದಿತಾ ಗೌಡ ಎಂಬ ಖಾತೆಯಿಂದ ಹಂಚಿಕೊಂಡ ಮೇಕಪ್ ಮಾಡಿಕೊಳ್ಳುವ ವಿಡಿಯೋಗೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ‘ಅಂದ ಇದ್ರೇ ಸಾಲದು ಕಣಮ್ಮಿ ಒಳ್ಳೆ ಗುಣ ನಡತೆ,ಸಂಸ್ಕಾರ ಇರಬೇಕು, ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ, ಹೆಣ್ಣಿಗೆ ಹೆಣತನದ ಬಗ್ಗೆ ಹೆಮ್ಮೆ ಬರುವುದು ಅವಳು ತಾಯಿ ಆದಾಗ ಮಾತ್ರ ಬಟ್ ನೀನು ಅದನ್ನೇ ತಿರಸ್ಕಾರ ಮಾಡಿ ಅದ್ಯಾವ ಸಾಧನೆ ಮಾಡೋಕ್ಕೆ ಹೊರಟಿದಿಯಾ ನಾ ಕಾಣೆ’…. ಎಂದು ನಿವೇದಿತಾ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನಕ್ಕೆ ಹೀಗೆ ಧಕ್ಕೆ ತರುವುದು ಒಳಿತಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ