NO ಸೋಶಿಯಲ್ ಮೀಡಿಯಾ ಎಂದ ಬಾಂಗ್ಲಾ
ಇತ್ತೀಚಿಗೆ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಸಿಗುತ್ತಿರುವ ಮೀಸಲಾತಿ ವಿರುದ್ಧ ಹೆಚ್ಚಿದ ಜನ ಆಂದೋಲನ ವ್ಯಾಪಕ ಪ್ರತಿಭಟನೆ ಕೋಮುಗಲಭೆ ಹಿಂಸಾಚಾರ ಅಶಾಂತಿಯನ್ನು ತಡೆಗಟ್ಟಲು.
ಬಾಂಗ್ಲಾದೇಶವು ಇನ್ಸ್ಟಾಗ್ರಾಮ್, ಟಿಕ್ಟಾಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಹಲವಾರು ಜನಪ್ರಿಯ ಸಾಮಾಜಿಕ ಜಾಲತಾಣ ಮಾಧ್ಯಮ ಗಳನ್ನು ಬ್ಯಾನ್ ಮಾಡಿದೆ. ಈ ನಿರ್ಧಾರವನ್ನು ಆಗಸ್ಟ್ 2ರ ಶುಕ್ರವಾರದಂದು ಘೋಷಿಸಲಾಯಿತು ಮತ್ತು ಇದು ಬಾಂಗ್ಲಾದೇಶದ ರಾಷ್ಟ್ರವ್ಯಾಪಿ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಗ್ಲೋಬಲ್ ಐಸ್ ನ್ಯೂಸ್ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ನಿಷೇಧವನ್ನು ಮೊದಲು ವರದಿ ಮಾಡಿತು. ಶುಕ್ರವಾರದಿಂದ, ಈ ಸಾಮಾಜಿಕ ಜಾಲಗಳು ಬಾಂಗ್ಲಾದೇಶದಾದ್ಯಂತ ಲಭ್ಯವಿರುವುದಿಲ್ಲ ಎಂದು ಸರ್ಕಾರದ ಪ್ರಕಟಣೆಯು ದೃಢಪಡಿಸಿದೆ .