Rajugowda Patil, a young leader, campaigned fiercely in Division No. 21 for the Gaddigowdas. P. C. Gaddigoudar ಗದ್ದಿಗೌಡರ ಪರ ಡಿವ್ಹಿಜನ್ ನಂ ೨೧ರಲ್ಲಿ ಬಿರುಸಿನ ಪ್ರಚಾರ ನಡೆಸಿದ ಯುವನಾಯಕ ರಾಜುಗೌಡ ಪಾಟೀಲ
P. C. Gaddigoudar ಗದ್ದಿಗೌಡರ ಪರ ಡಿವ್ಹಿಜನ್ ನಂ ೨೧ರಲ್ಲಿ ಬಿರುಸಿನ
ಪ್ರಚಾರ ನಡೆಸಿದ ಯುವನಾಯಕ ರಾಜುಗೌಡ ಪಾಟೀಲ
೨೦೨೪ ರ ಲೋಕಸಭಾ ಚುನಾವಣೆಯ ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಇಳಕಲ್ ನಗರದ ಮಂಡಲದ ವತಿಯಿಂದ ಬುಧವಾರದಂದು ನಗರದ ಡಿವ್ಹಿಜನ್ ನಂ ೨೧ ಶ್ರೀ ಪಂಚಮುಖಿ ಗಣಪನ ಆಶಿರ್ವಾದ ದೊಂದಿಗೆ ಮಾಜಿ ಶಾಸಕರ ಪುತ್ರ ರಾಜುಗೌಡ ಪಾಟೀಲ ಬಿರುಸಿನ ಪ್ರಚಾರವನ್ನು ನಡೆಸಿದರು.
ಮನೆ ಮನೆಗಳಿಗೆ ತೆರಳಿ ಕೇಂದ್ರ ಸರಕಾರ ಮಾಡಿದ ಅಭಿವೃದ್ದಿ ಕಾರ್ಯಗಳು ಮತ್ತು ಸಾಧನೆಗಳ ಬಗ್ಗೆ ಕರಪತ್ರಗಳನ್ನು ನೀಡುವ ಮೂಲಕ ಬಿಜೆಪಿ ಮತವನ್ನು ಹಾಕಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಮತಯಾಚನೆ ನಡೆಸಿದರು.
ಪ್ರಚಾರ ಕಾರ್ಯದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ ವಾರ್ಡಿನ ಸದಸ್ಯ ಶರಣಪ್ಪ ಅಮರಾವತಿ, ವಾರ್ಡಿನ ಮುಖಂಡ ಬಸವರಾಜ ಪೋಚಗುಂಡಿ ಹಾಗು ನಗರಸಭೆ ಸದಸ್ಯರುಗಳು, ಪ್ರಮುಖರು,ಶಕ್ತಿ ಕೇಂದ್ರದ ಪ್ರಮುಖರುಗಳು, ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಮತಯಾಚನೆಯನ್ನು ನಡೆಸಿದರು.