Karnataka State Public Service Street Lamp Workers Association ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪೌರಸೇವಾ ಬೀದಿದೀಪ ಕಾರ್ಮಿಕರ ಸಂಘದಿAದ ಬೆಳಗಾವಿಯಲ್ಲಿ ಮನವಿ ಸಲ್ಲಿಕೆ
ಬೆಳಗಾವಿ : ಸನ್ ೨೦೦೭-೨೦೦೮ ರಿಂದ ಸ್ಥಳೀಯ ಸಂಸ್ಥೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ನಗರ ಪಾಲಿಕೆ, ಮಹಾನಗರ ಪಾಲಿಕೆ ಗಳಲ್ಲಿ ದಿನಗೂಲಿ/ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದಿದೀಪ ನಿರ್ವಹಣೆಕಾರ್ಮಿಕರಿಗೆ ಗುತ್ತಿಗೆದಾರರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಂದ ಆಗುತ್ತಿರುವ ತಾರತಮ್ಯದ ಮತ್ತು ಅನ್ಯಾಯವನ್ನು ತಡೆಗಟ್ಟುವಂತೆ ಬೆಳಗಾವಿ ಅಧಿವೇಶನದಲ್ಲಿ ಡಾ.ಸುಧಾಕರ ಅವರಿಗೆ ಕರ್ನಾಟಕ ರಾಜ್ಯ ಪೌರಸೇವಾ ಬೀದಿದೀಪ ಕಾರ್ಮಿಕರ ಸಂಘದಿAದ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಪೌರಸೇವಾ ಬೀದಿದೀಪ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆನಂದ ದೇವಗಿರಿಕರ ಮಾತನಾಡಿ ಅಕಾಲಿಕ ಸುರಿಯುವ ಮಳೆಯಲ್ಲಿ ವಿದ್ಯುತ್ ತಂತಿ ತಗಲಿ ರಾಯಚೂರ, ಬದಾಮಿ (ಗುಳೆದಗುಡ್ಡ) ಗದಗ ಹಾಗೂ ಲಕ್ಷೇಶ್ವರ ಹಾಗೂ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಂಬದ ಮೇಲಿಂದ ಕೆಳಗೆ ಬಿದ್ದು ಕೈ ಕಾಲುಗಳು ಮುರಿದು ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ತೊಂದರೆಗಳನ್ನು ಅನುಭವಿಸುತ್ತಿರುವುದು ಜೀವನ ಪಕ್ಕೆ ಸಿಲುಕಿದಂತಾಗಿದೆ ಮತ್ತು ಮನೆಯರೆಲ್ಲ ಸದರಿಯವರ ಮೇಲೆ ಅವಲಂಭಿತರಾಗಿದ್ದು ಹೆಂಡತಿ ಸಂಕಷ್ಟಕ್ಕೆ ಪಾಲಾಗಿದೆ ಹಾಗೂ ಸೆಪ್ಟಿ ರವಿಕೆಗಳು ಇಲ್ಲದೆ ದಿನ ನಿತ್ಯ ಬರಿಗೈ ಇಂದಲೆ ನಾವು ಕೇಲಸ ಮಾಡುತ್ತಿರುವುದು ೨,೩,೪,೫,೬ ತಿಂಗಳಾದರು ವೇತನ ನೀಡದೆ ಇದ್ದುದರಿಂದ ಸಂಸಾರದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಹೊಗಿದ್ದು ಉಂಟು ತತ್ಸಮಾನ ಪದವಿಗಳನ್ನು ಕೇಳಿ ಹಿಂಸೆ ಕೊಡತಿದ್ದು.
ನಾವು ಹಲವಾರು ವರ್ಷಗಳಿಂದ ಬೀದಿ ದೀಪ ನಿರ್ವಹಣೆ ಮಾಡುತ್ತಾ ಬಂದಿದ್ದು ನಿಮ್ಮನ್ನು ತೆಗೆದು ಹಾಕುತ್ತವೆ ಅಂತಾ ಬೇದರಿಕೆ ಕೂಡಾ ಹಾಕುತ್ತರೆ ಗುರುತೀನಚೀಟಿ, ಬಯೋ ಮೈಟಿಕ್ ಹಾಜರಾತಿ, ಸೇವಾ ಪ್ರಮಾಣ ಪತ್ರ, ಗುತ್ತಿಗೇದಾರರಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೆವೆ ಸನ್ ೨೦೦೭-೨೦೦೮ ರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ನಗರ ಪಾಲಿಕೆ, ಮಹಾನಗರ ಪಾಲಿಕೆ) ಗಳಲ್ಲಿ ಬೀದಿದೀಪ ನಿರ್ವಹಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದರಿ ಹುದ್ದೆಗೆ ತಕ್ಕಂತೆ ಈ ವರೆಗೂ ಯಾವುದೇ ಸೇವಾಭದ್ರತೆಯನ್ನು ನೀಡಿರುವುದಿಲ್ಲಾ, ಇದಕ್ಕೆ ಪುಷ್ಟಿ ನೀಡುವಂತೆ ನಾವು ಸಹ ಪೌರಕಾರ್ಮಿಕರ ಮಾದರಿಯಲ್ಲಿಯೆ ಸೇವೆ ಸಲ್ಲಿಸುತ್ತಿದ್ದು.
ಅವರಿಗೆ ಒಂದು ನ್ಯಾಯ ನಮ್ಮಗೊಂದು ನ್ಯಾಯ ಮಾಡುತ್ತಿರುವುದು ಮಲತಾಯಿಯ ದೋರಣೆ ಮಾಡಿದಂತೆ ಪೌರಕಾರ್ಮಿಕರಿಗೆ ಮಾತ್ರ ಸಂಕಷ್ಟ ಪರಿಹಾರ ಭತ್ಯೆಯನ್ನು ನೀಡುತ್ತಿದ್ದು, ಈಗ ಇರುವ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯದ ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ತಂದೆ-ತಾಯಿಯವರೆ ಆಸ್ಪತ್ರೆ ಖರ್ಚು, ಇನ್ನಇತರೆ ಖರ್ಚುಗಳನ್ನು ಮಾಡುವುದು ಕಷ್ಟವಾಗುತ್ತಿದ್ದು, ಎಂತಹದೆ ಕಷ್ಟ ಕಾಲದಲ್ಲಿ ಬೀದಿ ದೀಪ ನಿರ್ವಹಣೆದಾರರು ಕೆಲಸದಲ್ಲಿ ಯಾವುದೇ ವಿಳಂಭವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದು, ಈಗಲೂ ಸುರಿಯುತ್ತಿರುವ ಆಕಾಲಿಕ ಮಳೆಯಲ್ಲಿಯು ಸಹ ಯಾವುದಾದರು ಒಂದು ದೂರವಾಣಿ ಕರೆಗೆ ಸ್ಪಂದಿಸಿ ಬೀದಿದೀಪ ನಿರ್ವಹಣೆಯಲ್ಲಿ ಯಾವುದೇ ತೊಂದರೆಯಾಗದAತೆ ಕಾರ್ಯನಿರ್ವಹಿಸುತ್ತಿರುವದು ಮಾನ್ಯ ಘನಸರ್ಕಾರಕ್ಕೆ ತಲುಪುತ್ತಿಲ್ಲಾ ಎಂಬುದು ಬೇಸರದ ಸಂಗತಿ.
ಈ ಹಿಂದೆ ಹೇಗೆ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಾತಿ ಮಾಡಿ ಆದೇಶಿಸಿದಂತೆ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು (ಬೀದಿದೀಪ ನಿರ್ವಹಣೆ ಸಿಬ್ಬಂದಿ) ಸಹ ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳುವುದು ಮತ್ತು ಪೌರಕಾರ್ಮಿಕರಿಗೆ ನೀಡುತ್ತಿರುವ ಸಂಕಷ್ಟ ಪರಿಹಾರ ಭತ್ಯೆಯನ್ನು ನಮ್ಮಗೂ ಸಹ ವಿಸ್ತರಿಸಿ ತಿದ್ದುಪಡಿ ಆದೇಶ ಮಾಡಬೇಕು ಎಂದು ವಿನಂತಿಸಿಕೊAಡರು.
ಈ ಸಮಯದಲ್ಲಿ ತೇರದಾಳ ಗದಗ ನೆರೆಗಲ್ ಅಣ್ಣಿಗೇರಿ ಬಳ್ಳಾರಿ ಇಲಕಲ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆನಂದ್ ಮಂಜುನಾಥ್ ದೇವಗಿರಕ, ಪೂಜಾರಿ ಪರಶುರಾಮ್ ಕಾಳು ಪವರ್ ಬಸಯ್ಯ ಸಾರಂಗಮಠ ಚಂದ್ರು ಅಣ್ಣ ಟೋಪಿ ಕ ಅಣ್ಣ , ಮಲ್ಲಿಕಾರ್ಜುನ್ ಅಣ್ಣ ಬಾಬುಜ, ಬಸವರಾಜಣ್ಣ, ಮಂಜು ಅಣ್ಣ , ಸಿದ್ದು ಅಣ್ಣ
ಮಂಜು ಮತ್ತಿತ್ತರರು ಇದ್ದರು.