ಮಹಾರಾಷ್ಟ್ರದಿಂದ ಮೆಕ್ಕಾ- ಮದಿನಾ ಕಾಲ್ನಡಿಗೆಯಲ್ಲಿ ತೆರಳಿದ ಯಾತ್ರಿಗೆ ಇಳಕಲ್ ನಲ್ಲಿ ಸನ್ಮಾನ
ಇಳಕಲ್: ಮೂಲತಃ ಮಹಾರಾಷ್ಟ್ರದ ನಾಸಿಕ ನಿವಾಸಿ ಸೈಯದ ಅಲಿ ಷಹಬಾಜ ಅವರು ಸುಮಾರು ಒಂದು ವರ್ಷಗಳ(೩೮೦ ದಿನ) ಕಾಲ ೮ ಸಾವಿರ ಕಿ.ಮೀ ಮಹಾರಾಷ್ಟ್ರದ ನಾಸಿಕ್ ನಿಂದ ಮೆಕ್ಕಾ ಮದೀನಾಗೆ ಬರಿ ಕಾಲ್ನಡಿಗೆಯಲ್ಲಿ ಉಪವಾಸ (ರೋಜಾ) ಯಾತ್ರೆ ತೆರಳಿದ್ದು ಸದ್ಯ ವಾಪಸಾಗಿ ಇಳಕಲ್ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಅವರಿಗೆ ಸನ್ಮಾನಿಸಲಾಯಿತು.
ಇಲ್ಲಿನ ಜೋಡ್ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರನ್ನು ಮುರ್ತುಜಾ ಆದ್ವಾನಿ, ಹುಸೇನಬಾಷಾ ಹುನಗುಂದ, ನಬಿ ಹುಣಚಗಿ ಅವರು ಸನ್ಮಾನಿಸಿ ಸ್ವಾಗತಿಸಿದರು.
ಪತ್ರಕರ್ತ ನಬಿ ಹುಣಚಗಿ ಮಾತನಾಡಿ ಸುಮಾರು ಒಂದು ವರ್ಷಗಳ ಕಾಲ ಉಪವಾಸ ದ ಮೂಲಕ ಕಾಲ್ನಡಿಗೆಯಲ್ಲಿ ಮೆಕ್ಕಾ ಮದೀನಾ ಯಾತ್ರೆ ಮಾಡಿದ ಅಲಿ ಸೈಯದ ಷಹಬಾಜ ಅವರು ಅಲ್ಲಾಹನ ಮೇಲಿಟ್ಟಿರು ಭಕ್ತಿ ಅಪಾರವಾದದ್ದು ಅವರಿಗೆ ಅಲ್ಲಾನ ಪ್ರೇರಣೆಯಿಂದಲೆ ಇಂತಹ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯ ಎಂದರು.