PKPS Bank meeting Rs 684 lakh BKCC loan disbursement: Mahantesh Pujari ಪಿಕೆಪಿಎಸ್ ಬ್ಯಾಂಕ್ ಸಭೆ ೬೮೪ ಲಕ್ಷ ರೂ ಬಿಕೆಸಿಸಿ ಸಾಲ ವಿತರಣೆ :ಮಹಾಂತೇಶ ಪೂಜಾರಿ

WhatsApp Group Join Now
Telegram Group Join Now
Instagram Group Join Now
Spread the love

PKPS Bank meeting Rs 684 lakh BKCC loan disbursement: Mahantesh Pujari ಪಿಕೆಪಿಎಸ್ ಬ್ಯಾಂಕ್ ಸಭೆ ೬೮೪ ಲಕ್ಷ ರೂ ಬಿಕೆಸಿಸಿ ಸಾಲ ವಿತರಣೆ :ಮಹಾಂತೇಶ ಪೂಜಾರಿ

ಪಿಕೆಪಿಎಸ್ ಬ್ಯಾಂಕ್ ಸಭೆ ೬೮೪ ಲಕ್ಷ ರೂ ಬಿಕೆಸಿಸಿ ಸಾಲ ವಿತರಣೆ :ಮಹಾಂತೇಶ ಪೂಜಾರಿ

ಇಳಕಲ್ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿAದ ೬೮೪.೬೫ ಲಕ್ಷ ರೂ ಬಿಕೆಸಿಸಿ ಸಾಲ ವಿತರಣೆ

ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಮಹಾಂತೇಶ ಪೂಜಾರಿ ಹೇಳಿದರು.

ಸೋಮವಾರದಂದು ಸಂಸ್ಥೆಯ ಕಾರ್ಯಾಲಯದ ಆವರಣದಲ್ಲಿ ನಡೆದ ೪೮ ನೇ ಸರ್ವ ಸಾಧಾರಣ ಸಭೆಯ

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ೯೧ ಲಕ್ಷ ರೂಭೂ ಅಭಿವೃದ್ಧಿ ಸಾಲವನ್ನು, ೬೮ ಲಕ್ಷ ರೂ ಬಿನ್ ಶೇತ್ಕಿ

ಸಾಲವನ್ನು, ಏಳು ಲಕ್ಷ ತೋಟಗಾರಿಕೆ ಸಾಲವನ್ನು, ೬ ಲಕ್ಷ ರೂ ಹನಿ ನೀರಾವರಿ ಸಾಲವನ್ನು

ನೀಡಿ ರೈತರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

PKPS Bank meeting Rs 684 lakh BKCC loan disbursement: Mahantesh Pujari ಪಿಕೆಪಿಎಸ್ ಬ್ಯಾಂಕ್ ಸಭೆ ೬೮೪ ಲಕ್ಷ ರೂ ಬಿಕೆಸಿಸಿ ಸಾಲ ವಿತರಣೆ :ಮಹಾಂತೇಶ ಪೂಜಾರಿ

ಸಂಘದ ಸದಸ್ಯರು ಮಾತನಾಡಿ ಸಾಲ ಕೇಳಲು ಬಂದರೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಸದಸ್ಯರನ್ನು

ತಿರುಗಾಡಿಸುತ್ತಾರೆ ಎಂದು ದೂರಿದರು.ನೀವು ಯಾವ ಸಾಲ ಕೇಳಿದ್ದೀರಿ ಯಾವಾಗ ತಿರುಗಾಡಿಸಿದರು

ಎಂಬುವದನ್ನು ಹೇಳಿ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆಯನ್ನು ಆಡಳಿತ ಮಂಡಳಿಯ ನಿರ್ದೇಶಕರು ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ರವಿ ಚಿತ್ತರಗಿ, ನಿರ್ದೇಶಕರಾದ ರಾಯನಗೌಡ ಪಾಟೀಲ, ಗುರು ಗಾಣಿಗೇರ, ಸುರೇಶ ಬಂಡರಗಲ್ಲ,

ಬಸಪ್ಪ ಬಾದವಾಡಗಿ, ಮಹೇಶ ಪಾಟೀಲ, ಶಿಲ್ಪಾ ಲಕ್ಕುಂಡಿ, ಮಂಜುನಾಥ ಕಟಗಿ,ಜಕ್ಕಪ್ಪ ಕಳ್ಳಿಗುಡ್ಡ, ಸಿದ್ದಣ್ಣ ಘಂಟಿ ,

ಬಸಮ್ಮ ಮೂಲಿಮನಿ, ಡಿಸಿಸಿ ಬ್ಯಾಂಕ್ ಸುಪರವೈಜರ ವಾಯ್ ಎಚ್ ಹಿರಿಯಣ್ಣವರ ಪಾಲ್ಗೊಂಡಿದ್ದರು.

ಸಂಘದ ಕಾರ್ಯದರ್ಶಿ ವೀರೇಶ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿದ್ದು ನಂದಿಕೋಲಮಠ ನಿರೂಪಿಸಿ ವಂದಿಸಿದರು


Spread the love

Leave a Comment

error: Content is protected !!