
Plant ಹಸಿರು ಉಸಿರಾಗಲು ಪ್ರತಿ ಮನೆಮನೆ ಮುಂದೆ ಸಸಿ ನೆಡಿ
ನಂದಯ್ಯಗೋಳ ಕಂಪ್ಯೂಟರ್ ಸೆಂಟರ್‌ನಿಂದ ಸಸಿ ವಿತರಣೆ
ಬಾಗಲಕೋಟೆ: ಮಳೆ ಇಲ್ಲದೇ ಬೆಳೆ ಇಲ್ಲ. ಬೆಳೆ ಇಲ್ಲದೇ ಅನ್ನವಿಲ್ಲ. ಈ ಸಮಸ್ಯೆ ಸರಿಪಡಿಸಲು ಪರಿಸರ ಸಮತೋಲನ ಕಾಯ್ದುಕೊಳ್ಳುವುದೇ ಉಳಿದ ಮರ‍್ಗ. ಹೌದು, ಪ್ರತಿರ‍್ಷ ಜೂನ್-೫ ಪರಿಸರ ದಿನಾಚರಣೆ ನಿಮಿತ್ತ ಸಮಾನ ಮನಸ್ಕರ ಪರಿಸರ ಪ್ರೇಮಿಗಳ ತಂಡದ ವಿಕ್ರಮ್ ಅಡವಯ್ಯ ನಂದಯ್ಯಗೋಳ ಅವರು ಒಂದಿಲ್ಲೊಂದು ವಿಶೇಷತೆ ಕರ‍್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ.
ಇಂದು ಪರಿಸರ ದಿನಾಚರಣೆಯ ನಿಮಿತ್ತ ಮುಧೋಳ ತಾಲೂಕಿನ ಲೋಕಾಪುರದ ನಂದಯ್ಯಗೋಳ ಕಂಪ್ಯೂಟರ್ ಸೆಂಟರ್‌ನಲ್ಲಿ ಲೋಕಾಪುರದ ಸಾಲುಮರದ ತಿಮ್ಮಕ್ಕ ಉದ್ಯಾನವನದಿಂದ ಎರಡನೂರಕ್ಕೂ ಹೆಚ್ಚು ವಿವಿಧ ಬಗೆ ಸಸಿಗಳನ್ನು ತಂದು ತಮ್ಮ ಗ್ರಾಹಕರಿಗೆ, ವಿದ್ಯರ‍್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಅಲ್ಲದೇ ಕಳೆದ ಹಲವು ರ‍್ಷಗಳಿಂದ ಲೋಕಾಪುರದ ವಿಕ್ರಮ್ ನಂದಯ್ಯಗೋಳ ಅವರು ಸಮಾನ ಮನಸ್ಕರ ಪರಿಸರ ಪ್ರೇಮಿಗಳ ತಂಡವನ್ನು ಕಟ್ಟಿಕೊಂಡು ಈ ಹಿಂದೆ ರ‍್ಚಗಲ್ ಕೆರೆಯ ಹತ್ತಿರ ನೂರಾರು ಸಸಿಗಳನ್ನು ನೆಟ್ಟಿದ್ದಾರೆ. ಬೋಳು ಬೆಟ್ಟಕ್ಕೆ ಹಸಿರು ಹೊದಿಸಲು ಸೀಡ್‌ಬಾಲ್ ಸೂತ್ರದಿಂದ ಸಾವಿರಾರು ಸೀಡ್ ಬಾಲ್‌ಗಳನ್ನು ಗುಡ್ಡದಲ್ಲಿ ಎಸೆಸಿದ್ದಾರೆ. ಕಳೆದ ರ‍್ಷ ನೂರಾರು ಆಲದಮರ, ಅರಳಿಗಿಡ, ಹತ್ತಿ ಗಿಡ, ಅಶೋಕ ಮರ, ಬೇವಿನ ಮರ, ಚರ‍್ರಿ ಗಿಡದ ಸಸಿಗಳನ್ನು ಯಾದವಾಡ ರಸ್ತೆ ಬದಿಯ ಹೊಲಗಳ ಬದುಗಳಲ್ಲಿ ನೆಟ್ಟಿದ್ದಾರೆ. ಅವುಗಳು ಈಗ ಬೆಳೆದು ನೆರಳಾಗುತ್ತಿವೆ.
ವಿಕ್ರಮ್ ನಂದಯ್ಯಗೋಳ ಅವರು ೨೦೧೯ರರಲ್ಲಿ ನಡೆದ ತಮ್ಮ ಮದುವೆ ಸಮಾರಂಭಕ್ಕೆ ಆಗಮಿಸಿದ ಜನರಿಗೆ ಸಾವಿರಾರು ವಿವಿಧ ತಳಿಯ ಸಸಿ, ಗಿಡಗಳನ್ನು ನೀಡಿ, ಲೋಕೇಶ್ವರ ದೇವಸ್ಥಾನದ ಆವರಣದಲ್ಲಿ ಗಿಡನೆಟ್ಟು ಪರಿಸರ ಪ್ರೇಮವನ್ನು ಸಾಕ್ಷಿಕರಿಸಿದರು. ಒಟ್ಟಿನಲ್ಲಿ ಎಲ್ಲರೂ ಪರಿಸರ ಸ್ನೇಹಿ, ಮಳೆಗೆ ಆಹ್ವಾನವನ್ನು ನೀಡುವ ಪ್ರಯತ್ನವನ್ನು ಮಾಡಬೇಕು.ಹಸಿರೇ ನಮ್ಮೆಲ್ಲರ ಉಸಿರು ಎಂಬುದನ್ನು ಅರಿತು ಜೀವನ ಸಾಗಿಸಬೇಕು ಎನ್ನುವದು ವಿಕ್ರಮ್ ನಂದಯ್ಯಗೋಳ ಅವರು ಅಭಿಲಾಷೆಯಾಗಿದೆ.
ಹೇಳಿಕೆ: ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿರ‍್ಷ ಜೂನ್ -೫ರಂದು ಪರಿಸರ ದಿನಾಚರಣೆ ನಿಮಿತ್ತ ಗಿಡ ನೆಡುವುದು, ಸಸಿಗಳನ್ನು ವಿತರಣೆ ಮಾಡುವ ಕರ‍್ಯವನ್ನು ಸಮಾನ ಮನಸ್ಕರ ಪರಿಸರ ಪ್ರೇಮಿಗಳ ತಂಡದಿಂದ ಮಾಡುತ್ತ ಬಂದಿದ್ದೇವೆ. ಈ ರ‍್ಷ ವಿಶೇಷವಾಗಿ ನಂದಯ್ಯಗೋಳ ಕಂಪ್ಯೂಟರ್ ಸೆಂಟರ್‌ನಿಂದ ಎರಡು ನೂರಕ್ಕೂ ವಿವಿಧ ತಳಿಯ ಸಸಿಗಳನ್ನು ತಂದು ನಮ್ಮ ಗ್ರಾಹಕರಿಗೆ, ವಿದ್ಯರ‍್ಥಿಗಳಿಗೆ, ಜನರಿಗೆ ನೀಡುತ್ತಿದ್ದೇವೆ. ನಮ್ಮ ಕೈಲಾದಷ್ಟು ಹಸಿರು ನರ‍್ಮಾಣಕ್ಕೆ ಸೇವೆ ಮಾಡುತ್ತಿದ್ದೇವೆ. – ವಿಕ್ರಮ್ ನಂದಯ್ಯಗೋಳ, ನಂದಯ್ಯಗೋಳ ಕಂಪ್ಯೂಟರ್ ಸೆಂಟರ್ ಲೋಕಾಪುರ





