ಇಳಕಲ್‌ದಲ್ಲಿ ಸೈಬರ್ ಕ್ರೈಂ ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಪೋಲಿಸರು
ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ಶಹರ್ ಪೋಲಿಸ್ ಠಾಣೆ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ಜಿಲ್ಲಾ ಪೋಲಿಸ್ ಅಧಿಕಾರಿಗಳ ಆದೇಶ ಮೇರೆಗೆ ನಗರದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕಂಠಿ ಸರ್ಕಲ್ ಗೆ ಆಗಮಿಸಿ ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ಅಪಘಾತಗಳ ಬಗ್ಗೆ ಮತ್ತು ಸೈಬರ್ ಕ್ರೈಂ ಗಳ ಬಗ್ಗೆ ಸೋಮವಾರದಂದು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು.ಎಎಸ್ಐ ಕೆ.ವಾಯ್ ವಾಲಿಕಾರ, ಪೋಲಿಸ್ ರಜಾಕ್ ಗುಡದಾರಿ ಮಾತನಾಡಿ ಬೈಕ್ ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕು , ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಸದ್ಯ ಹೆಚ್ಚುತ್ತೀರುವ ಸೈಬರ್ ಕ್ರೈಂಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು.
ನಿಮ್ಮಗೆ ಕರೆಮಾಡಿ ನಾವು ಬ್ಯಾಂಕ್ ಸಿಬ್ಬಂದಿ ವರ್ಗದವರು ಹಾಗೂ ಮ್ಯಾನೇಜರ್ ಎಂದು ನಂಬಿಸಿ ನಿಮ್ಮ ಓಟಿಪಿಯನ್ನು ಪಡೆದುಕೊಂಡು ಹಣವನ್ನು ಲಂಪಾಟಾಯಿಸುತ್ತಿದ್ದಾರೆ. ಆದ್ದರಿಂದ ನಿಮ್ಮ ಮೋಬೈಲ್ ಗೆ ಬರುವ ಓಟಿಪಿ ಗಳನ್ನು ಯಾರಿಗೂ ಶೇರ್ ಮಾಡಬಾರದು ಪೋಲಿಸ್ ಸಹಾಯಬೇಕಾದಲ್ಲಿ ೧೧೨ ಗೆ ಕರೆ ಮಾಡಬಹುದು ಎಂದು ಹೇಳಿದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)