Siddaramaiah ಸಿದ್ದರಾಮಯ್ಯ ವಿರುದ್ಧ ಪೂರ್ವಗ್ರಹ ಪೀಡಿತ ಆರೋಪ – ಅಭಿಮಾನಗಳಿಂದ ಖಂಡನೆ
ಇಳಕಲ್ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಜೆಡಿಎಸ್ ಪಕ್ಷಗಳು ಮೂಡಾ ಪ್ರಕರಣವನ್ನು ಆದರಿಸಿ ಮಾಡುತ್ತಿರುವ ಆರೋಪಗಳು ಕಪೋಲ ಕಲ್ಪಿತ ಹಾಗೂ ಪೂರ್ವಗ್ರಹ ಪೀಡಿತ ಎಂದು ಹುನಗುಂದ್ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಹಳೆಯ ಪ್ರಕರಣವೊ೦ದನ್ನು ಕೆದಕಿ, ರಾಜ್ಯಪಾಲರ ಮುಖೇನ ಮುಖ್ಯಮಂತ್ರಿಗಳ ವಿರುದ್ಧ ಪ್ರಕರಣ ದಾಖಲಿಸುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ಹುದ್ದೆಯ ದುರುಪಯೋಗ ನಡೆಯುತ್ತಲಿದೆ.
ಶೋಷಿತ ಹಿಂದುಳಿದ ವರ್ಗಗಳ ಬಗೆಗಿನ ಅಸಹನೆಯ ಪರಂಪರೆಯನ್ನು ಬಿಜೆಪಿ ಮುಂದುವರಿಸುತ್ತಿದೆ ಕಾನೂನು ಪ್ರಕಾರ ತನಿಖೆಯಾಗಲಿ ತೀರ್ಪು ಬರಲಿ ಆದರೆ ಜನಪರ ಸರಕಾರ ವೊ೦ದರ ನಾಯಕರ ತೇಜೋವಧೆಗೆ ಯಾರೇ ಪ್ರಯತ್ನಿಸಿದರು ಜನಾಂದೋಲನದ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಬು ಚಲವಾದಿ, ಅಬ್ದುಲ್ ಹಳ್ಳಿ, ಮಹಾಂತೇಶ್ ನೀಲನಾಯಕ್, ಚಂದ್ರಶೇಖರ ಸನ್ನಿ ಮಾತನಾಡಿ ಕೋಮುವಾದಿ ಪ್ರಗತಿ ವಿರೋಧಿ ಶಕ್ತಿಗಳ ಪ್ರಯತ್ನ ಫಲಿಸದು ವಿರೋಧಪಕ್ಷದವರದು ಪಾದಯಾತ್ರೆಯಲ್ಲ ಸ್ವಾರ್ಥ ಯಾತ್ರೆಯೆಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಾದ ಎಲ್ಲಪ್ಪ ಅಂಬಿಗೇರ್ ಬಸವರಾಜ ಜಾಲಿಹಾಳ್ ಮಲ್ಲು ಐಹೊಳಿ ಮತ್ತಿತರರು ಹಾಜರಿದ್ದರು.