
Tehsildar Amaresh Pammara ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ :ತಹಸೀಲ್ದಾರ ಅಮರೇಶ ಪಮ್ಮಾರ
ಇಳಕಲ್ಲ : ಹುಟ್ಟಿನಿಂದಲೂ ನಾವು ಕನ್ನಡಿಗರಾಗಿದ್ದು, ನಮ್ಮ ಉಸಿರು ಇರುವವರೆಗೂ ಕನ್ನಡ ಭಾಷೆಯನ್ನು ಉಳಿಸಿ,
ಬೆಳೆಸುವ ಕೆಲಸವಾಗಬೇಕು ಎಂದು ತಹಸೀಲ್ದಾರ ಅಮರೇಶ ಪಮ್ಮಾರ ಹೇಳಿದರು.
ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ
ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾ ಅಧ್ಯಕ್ಷ ಮಹಾದೇವ ಕಂಬಾಗಿ, ಸರಕಾರಿ ನೌಕರ ಸಂಘದ ತಾಲೂಕಾ
ಅಧ್ಯಕ್ಷ ಪರಶುರಾಮ ಪಮ್ಮಾರ ಮಾತನಾಡಿದರು.
ಕರ‍್ಯಕ್ರಮದಲ್ಲಿ ಉಪತಹಸೀಲ್ದಾರ ಈಶ್ವರ ಗಡ್ಡಿ, ಕರವೇ ಮುಖಂಡ ಮಹಾಂತೇಶ ವಕ್ಕಲಕುಂಟಿ, ಪತ್ರರ‍್ತ ಉದಯಕುಮಾರ ವದ್ದಿ
ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ತಹಸೀಲ್ದಾರ ಕರ‍್ಯಾಲಯದ ಸಿಬ್ಬಂದಿ ರ‍್ಗದವರು ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)





