ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಡವಾಗಿ ಬಂದ ಸಿಬ್ಬಂದಿಗಳನ್ನ ಹೊರಹಾಕಿ ಬೀಗ ಜಡಿದ ಖಾನಾಪೂರ ಎಸ್‌ಕೆ ಗ್ರಾಮಸ್ಥರು ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರದAದು ನಡೆಯಿತು.
ಸರಿಯಾದ ಸಮಯಕ್ಕೆ ಹಾಜರಿದ್ದ ಸಿಬ್ಬಂದಿ ಸಹಿ ಹಾಕಿದ ನಂತರ ರಜಿಸ್ಟರ್ ತೆಗೆದುಕೊಂಡ ಗ್ರಾಮಸ್ಥರು ತಡವಾಗಿ ಬಂದ ಸಿಬ್ಬಂದಿಗಳಿಗೆ ಸಹಿ ಹಾಕಲು ಅವಕಾಶ ಕೊಡದೆ ಮೇಲಾಧಿಕಾರಿಗಳು ಬರುವವರೆಗೂ ಹೊರಹಾಕಿ ಪ್ರತಿಭಟಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಹೆಚ್.ಒ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೫ ದಿನಗಳಿಂದ ವೈದ್ಯರೇ ಇಲ್ಲ. ಸಿಬ್ಬಂದಿ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೇಳುವವರೂ ಇಲ್ಲ… ಕೇಳುವವರೂ ಇಲ್ಲ… ರಾತ್ರಿಯಾದರೆ ಸಾಕು ಆಸ್ಪತ್ರೆಗೆ ಬೀಗ ಹಾಕಲಾಗುತ್ತೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ ಎದುರು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.