environment ಪರಿಸರದ ಜೊತೆಗೆ ಭೂಮಿಯ ರಕ್ಷಣೆ ಮಾಡಿ : ಶಾಸಕ ಕಾಶಪ್ಪನವರ
ಇಳಕಲ್ : ಪರಿಸರ ಹಾಳಾಗುತ್ತಿರುವದರಿಂದ ತಾಪಮಾನ ಹೆಚ್ಚಾಗುತ್ತಿದ್ದು ಪರಿಸರದ ಜೊತೆಗೆ ಭೂ ತಾಯಿಯ ರಕ್ಷಣೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಚಂದನ ಪ್ರತಿಷ್ಠಾನ ವತಿಯಿಂದ ಸೋಮವಾರದಂದು ಶರಣಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಇಲ್ಲವೇ ಮನೆಯ ಹತ್ತಿರ ಇರುವ ಶಾಲೆ ದೇವಸ್ಥಾನಗಳ ಮುಂದೆ ಸಸಿ ನೆಟ್ಟು ಅವುಗಳನ್ನು ಬೆಳೆಸಬೇಕು ಎಂದು ಕರೆಕೊಟ್ಟರು.
ಮುಖ್ಯ ಅತಿಥಿಗಳಾಗಿ ಶಹರ್ ಪೋಲಿಸ್ ಠಾಣೆಯ ಪಿಎಸ್ಐ ಎಸ್ ಆರ್ ನಾಯಕ, ತಾಲೂಕು ಅರಣ್ಯ ಅಧಿಕಾರಿ ನಾಗರತ್ನ ಕಬಾಡಿ , ಶರಣಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾಂತಪ್ಪ ಕಡಿವಾಲ ಆಗಮಿಸಿದ್ದರು. ಈ ಎಲ್ಲರನ್ನೂ ಪತ್ರಕರ್ತರ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿನೋದ ಬಾರಿಗಿಡದ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬಿ.ಬಾಬು, ಸಜ್ಜನರಾಜ ಮೆಹತಾ, ಮಹಾಂತೇಶ ಗೊರಜನಾಳ, ಖಾಜಾಸಾಬ ಸೋಲ್ಲಾಪೂರ, ಭೀಮಣ್ಣ ಗಾಣಿಗೇರ, ನಬಿ ಹುಣಚಗಿ, ಮಹಾಂತೇಶ ಯಲಬುರ್ತಿ, ಶಿರಸಪ್ಪ ಪತ್ತಾರ, ಚಿನ್ನು ಗೋನಾಳಮಠ, ಮುರ್ತುಜ ಕಂದಗಲ್ಲ, ಶಂಕರ ಮಡ್ಡಿ, ರಮೇಶ ಭಜಂತ್ರಿ ಮತ್ತು ಚಂದನ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ವಿರೇಶ ಸಿಂಪಿ ಸ್ವಾಗತಿಸಿದರು, ಶಿರಸು ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು, ಕೆ ಎಚ್ ಸೋಲಾಪೂರ ವಂದಿಸಿದರು.