animals ಮೂಕ ಪ್ರಾಣಿಗಳ ಆರೋಗ್ಯ ಕಾಪಾಡಿ :ಭರಮಪ್ಪ ಮಾದರ
ಇಳಕಲ್ಲ : ಮೂಕ ಪ್ರಾಣಿಗಳ ಆರೋಗ್ಯವನ್ನು ರಕ್ಷಿಸುವಲ್ಲಿ ಪಶು ವೈದ್ಯರು ಶ್ರಮ ವಹಿಸಬೇಕು ಎಂದು
ದಮ್ಮೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭರಮಪ್ಪ ಮಾದರ ಕರೆಕೊಟ್ಟರು.
ಇಳಕಲ್ಲ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಹಮ್ಮಿಕೊಂಡ ಕಾಲುಬೇನೆ ರೋಗದ ಆರನೇ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದ ಅವರು ರೈತರ ಜೀವನಾಡಿಗಳಾದ ಎತ್ತು ಎಮ್ಮೆ ಮುಂತಾದ ಪ್ರಾಣಿಗಳಿಗೆ ರೋಗ ಬಂದಾಗ
ಕೂಡಲೇ ಬಂದು ಅವುಗಳ ರಕ್ಷಣೆ ಮಾಡಿದರೆ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ವೈದ್ಯ ಸಂಗಮೇಶ ಅಂಗಡಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಪಶುಗಳಿಗೆ ಕಾಲುಬೇನೆ ರೋಗ ಹೆಚ್ಚಾಗಿ
ಕಾಡುತ್ತಿದ್ದು ಅದಕ್ಕೆ ಸರಕಾರ ಪೂರ್ಣ ಪ್ರಮಾಣದಲ್ಲಿ ಔಷಧಿಗಳನ್ನು ಪೂರೈಸುತ್ತಿದೆ ಪಶುಗಳ ಮಾಲಿಕರು
ಆದಷ್ಟು ಬೇಗನೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿ ಬಿ ಬಿಲ್ಲೂರ,ಸಂತೋಷ ಹನಮಸಾಗರ,ಯಮನೂರ ಕೆಲೂರ, ಮಲ್ಲಪ್ಪ ಬಿಲ್ಲೂರ,
ಯಮನೂರ ಕಟ್ಟಿಮನಿ,ಆದೇಶ ಕೊಮನೂರ ಮಂಜು ದಾಸರ ಮತ್ತಿತರರು ಉಪಸ್ಥಿತರಿದ್ದರು.
ವರದಿ :ಭೀಮಣ್ಣ ಗಾಣಿಗೇರ (ಇಳಕಲ್ಲ)