ನಮಗೂ ರಕ್ಷಣೆ ಕೊಡಿ : ಬಿಡಾಡಿ ದನಗಳು ಇಳಕಲ್ ಪೋಲಿಸ್ ಠಾಣೆಗೆ ಮೊರೆ !
ಬಾಗಲಕೋಟ / ಇಳಕಲ್ : ಮಂಗಳವಾರ ಮುಂಜಾನೆ ಸಾಕಷ್ಟು ಬಿಡಾಡಿ ದನಗಳು ಪೋಲಿಸ್ ಠಾಣೆಯ ಆವರಣದಲ್ಲಿ ನಿಂತು ನಮಗೂ ರಕ್ಷಣೆ ಕೊಡಿ ಎಂದು ಮೊರೆ ಹೊಕ್ಕವು ಏನೋ ಎಂಬ ಭಾವ ಕಂಡು ಬಂದಿತು.
ಬಿಡಾಡಿ ದನಗಳು ಪೋಲಿಸ್ ಠಾಣೆಯ ಆವರಣದಲ್ಲಿ ಹಲವಾರು ಕಾಲ ಮೌನವಾಗಿ ನಿಂತುಕೊ0ಡು ಠಾಣೆಯತ್ತ ಮುಖ ಮಾಡಿದಾಗ ಪತ್ರಕರ್ತರ ಕ್ಯಾಮರಾಗಳಿಗೆ ಆಹಾರವಾದವು.
ಕೆಲಕಾಲದ ನಂತರ ಅವುಗಳು ಮಾಮೂಲಾಗಿ ತರಕಾರಿ ಮಾರುಕಟ್ಟೆಯತ್ತ ಮತ್ತು ಗಲ್ಲಿ ಗಲ್ಲಿಗಳಲ್ಲಿ ನಿತ್ಯದ ಆಹಾರವನ್ನು ಹುಡುಕಿಕೊಂಡು ಸಾಗಿದವು.
ಆದರೆ ಮಂಗಳವಾರದ0ದು ಏಕೆ ಪೋಲಿಸ್ ಠಾಣೆಯ ಆವರಣದಲ್ಲಿ ಬಹಳಷ್ಟು ಕಾಲ ನಿಂತುಕೊAಡವು ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡಿ ಬಂದಿತು.