ಬೀದಿ ದೀಪ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿರಿ : ಆನಂದ ದೇವಗಿರಿಕರ
ಬಾಗಲಕೋಟೆ : ಜಿಲ್ಲಾ ಬೀದಿ ದೀಪ ನಿರ್ವಹಣೆಯ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಕನಿಷ್ಠ ವೇತನಸೌಲಭ್ಯಗಳನ್ನು ಒದಗಿಸುವುಂತೆ ಬಾಗಲಕೋಟೆಯ ಜಿಲ್ಲಾಡಳಿತ ಭವನದ ಮುಂದೆ ಗುರುವಾರದಂದು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಹಾಗೂ ಜಿಲ್ಲಾಧ್ಯಕ್ಷ ಆನಂದ ದೇವಗಿರಿಕರ ಮಾತನಾಡಿ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಬೀದಿ ದೀಪ ನಿರ್ವಹಣೆ ಹೊರಗುತ್ತಿಗೆ ಕಾರ್ಮಿಕರ ಗಳಾಗಿದ್ದು ಸರಿ ಸುಮಾರು ೧೫ – ೨೦ ವರ್ಷಗಳಿಂದ ಬೀದಿ ದೀಪ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು.
ಗುತ್ತಿಗೆದಾರರು ಹಾಗೂ ನಗರಸಭೆ ಅಧಿಕಾರಿಗಳು ನಮಗೆ ನ್ಯಾಯುತವಾಗಿ ಸಿಗಬೇಕಾದ ಸೌಲಭ್ಯಗಳಾದ ಗುರಿಜಾ ಚೀಟಿ ಸಮವಸ್ತ್ರ ಹಾಜರಾತಿ ಪ್ರಮಾಣ ಪತ್ರಗಳು ಸಂರಕ್ಷಣೆ ವಿಮೆಗಳಾದ ಪಿ ಎಫ್ / ಇ ಎಸ್ ಐ ಆದಂತ ಸೌಲಭ್ಯಗಳನ್ನು ಕೊಡುತ್ತಿಲ್ಲ .
ಸರಿ ಸುಮಾರು ೧೫ ೨೦ ವರ್ಷಗಳ ನಾವುಗಳು ಸದರಿ ಗುತ್ತಿದ್ದಾರರಾಗಿ ಹಾಗು ನಗರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದೇವೆ ಆದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಮಾತನಾಡಿ ನಾವು ಹತ್ತು-ಹದಿನೈದು ವರ್ಷಗಳಿಂದ ದುಡಿಯುತ್ತಾ ಬಂದರು ಇವರಿಂದ ಯಾವುದೇ ರೀತಿಯ ಸೇವಾ ಭದ್ರತೆ ಇರುವುದಿಲ್ಲ ಹಾಗೂ ಕನಿಷ್ಠ ವೇತನ ಸಹಿತ ನೀಡುತ್ತಿಲ್ಲ ಇದು ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆ ಆಗುತ್ತದೆ ಮತ್ತು ಕಾರ್ಮಿಕ ಕಾನೂನುಗಳು ಸಂಪೂರ್ಣವಾಗಿ ಉಲ್ಲಂಘನೆ ಆಗಿರುತ್ತದೆ.
ಸದರಿ ವಿಷಯವಾಗಿ ಧ್ವನಿ ಎತ್ತಿದ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುತ್ತಾರೆ ಬೀದಿ ದೀಪ ನಿರ್ವಹಣೆಯ ಕೆಲಸ ನಂಬಿ ಬದುಕುತ್ತಿರುವ ಬಡ ಕಾರ್ಮಿಕ ಕುಟುಂಬಗಳಿಗೆ ತೊಂದರೆಯಾಗುತ್ತಿದ್ದು ಮಾನ್ಯ ದಯಾಳುಗಳಾದ ತಾವುಗಳು ನಮಗೆ ನ್ಯಾಯಯುತವಾದ ಸಿಗಬೇಕಾದ ಸೇವಾ ಭದ್ರತೆ ಕನಿಷ್ಠ ವೇತನ ಸೌಲಭ್ಯ ಒದಗಿಸಿಕೊಡುವಂತೆ ಹಾಗೂ ನಂಬಿ ಬದುಕಿರುವ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಹೆಚ್ಚುವರಿ ಉಪಆಯುಕ್ತ ಪರಶುರಾಮ್ ಶಿನ್ನಾಳ್ಕರ್ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲೂಕಾ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಭೀಮಣ್ಣ ಗಾಣಿಗೇರ