ಶಾಶ್ವತ ಪರಿಹಾರ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ : ಸಚಿವರ ಎದುರು ಕಣ್ಣೀರಿಟ್ಟ ಸಂತ್ರಸ್ಥರು
ಬಾಗಲಕೋಟ : ಎರಡು ದಶಕದಿಂದ ಶಾಶ್ವತ ಪರಿಹಾರ ಕಲ್ಪಿಸಿಲ್ಲ ನಮ್ಮ ಬದುಕು ಬೀದಿಗೆ ಬರುವಂತಾಗಿದೆ ನೀವಾದರು
ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರವಾಹದಿಂದ ಮನೆ ಕಳೆದುಕೊಂಡು ಮುಧೋಳ ಕಾಳಜಿ ಕೇಂದ್ರದಲ್ಲಿ
ಆಶ್ರಯ ಪಡೆದಿರುವ ಮಹಿಳೆಯರು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಎದುರು ಕಣ್ಣೀರು ಹಾಕಿದ್ದಾರೆ.
ಪ್ರವಾಹ ಪರಿಶೀಲನೆಗಾಗಿ ಮುಧೋಳ ಕಾಳಜಿ ಕೇಂದ್ರಕ್ಕೆ ಆಗಮಿಸದ ವೇಳೆ ಸಚಿವರನ್ನು ಸುತ್ತುವರಿದ ಮಹಿಳೆಯರು,
ಶಾಶ್ವತ ಪರಿಹಾರ ನೀಡುವ ಮೂಲಕ ಪ್ರವಾಹ ಪರಿಸ್ಥಿತಿಯಿಂದ ನಮಗೆ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಸೇರಿದಂತೆ ಇತರರು ಇದ್ದರು.