PSI Channaiah Devuraಬೈಕ್ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದ ಪಿಎಸ್ಐ ಚನ್ನಯ್ಯ ದೇವೂರ
ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶ್ರೀವಿಜಯ ಮಹಾಂತೇಶ ಸರ್ಕಲ್ದಲ್ಲಿ ಪಿಎಸ್ಐ ಚೆನ್ನಯ್ಯ ದೇವೂರ
ಸಾರ್ವಜನಿಕರಿಗೆ ಸಂಚಾರ ನಿಯಮಗಳ ಜಾಗೃತಿಯನ್ನು ಮೂಡಿಸಿದರು.
ಹೆಲ್ಮೆಡ್ , ಲೈಸನ್ಸ್ ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.
ಹೆಲ್ಮೆಟ್ ಧರಿಸಿಕೊಂಡು ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಅಭಿನಂದಿಸಿದರು.
ಅದೇ ರೀತಿ ಕೆಲವೊಂದಿಷ್ಟು ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ನೀಡಿ ಮಾತನಾಡಿದ ಕಳೆದ
ತಿಂಗಳಿAದ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ
ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ನೀಡಲಾಯಿತು.
ಈ ಸಮಯದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಸಿದ್ದು ಕವಲಿ, ಎಸ್.ವೈ. ಇಟಗಿ, ಪಿ.ಟಿ.ಪವಾರ,
ಎನ್.ಬಿ.ಹುನಗುಂದ, ಬಿ. ಎಸ್. ಹಿರೇಮಠ, ಎಸ್.ವೈ.ತಳವಾರ, ರಮೇಶ ಅಂಬಿಗೇರ ಇತರರು ಇದ್ದರು.