21 ಭಾಗದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ
ಇಳಕಲ್ : ನಗರದ ೩೧ ವಾರ್ಡುಗಳ ೨೧ ಭಾಗದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗುವದು.
ಅದಕ್ಕಾಗಿ ಸಂಬAಧಿಸಿದ ಉತ್ಸವ ಸಮಿತಿಗಳು ಪೋಲಿಸ್ ಠಾಣೆ, ನಗರಸಭೆ ಮತ್ತು ಕೆಪಿಟಿಸಿಎಲ್ ಕಚೇರಿಗಳ
ಅನುಮತಿಯನ್ನು ತೆಗೆದುಕೊಂಡು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಭರದಿಂದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಶನಿವಾರದಂದು ಮುಂಜಾನೆ ಈ ಎಲ್ಲಾ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಮೆರವಣಿಗೆಯಲ್ಲಿ ತಂದು
ನಿಗದಿತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಕೆಲವು ಸಮಿತಿಗಳು ಒಂದು ದಿನ ಮತ್ತಷ್ಟು ಸಮಿತಿಗಳು ಎರಡು ದಿನ ಮತ್ತು ಉಳಿದ ಸಮಿತಿಗಳು ಐದು ದಿನಕ್ಕೆ ಗಣೇಶ ವಿಸರ್ಜನೆ ಮಾಡಲಿದ್ದಾರೆ.