attempted suicide ವೇತನ ವಿಳಂಬ; ಸಿಎಂಸಿ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ
ರಾಯಚೂರು : ಕಳೆದ ೭ ತಿಂಗಳಿನಿAದಲೂ ವೇತನ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತ
ರಾಯಚೂರು ನಗರಸಭೆ ಗುತ್ತಿಗೆ ನೌಕರ ಎಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ನಗರಸಭೆ ಗುತ್ತಿಗೆ ನೌಕರನನ್ನು ಅಸ್ಟರ್‌ಅಲಿ ಎಂದು ಗುರುತಿಸಲಾಗಿದೆ.
ಅಸ್ಟರ್‌ಅಲಿ ನಗರಸಭೆಯಲ್ಲಿ ಎಲೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದು
ಮಾಸಿಕ ೧೫ ಸಾವಿರ ವೇತನ ಪಡೆಯುತ್ತಿದ್ದ. ಆದರೆ, ಕಳೆದ ೭ ತಿಂಗಳಿನಿAದಲೂ
ಈತನಿಗೆ ನಗರಸಭೆಯಿಂದ ವೇತನ ದೊರೆತಿರಲಿಲ್ಲ ಎನ್ನಲಾಗಿದೆ.
ಒಟ್ಟು ೧ ಲಕ್ಷದವರೆಗೂ ಬಾಕಿ ಇರುವುದಾಗಿ ಆತನ ಪರಿಚಯಸ್ಥರು ಮಾಹಿತಿನೀಡಿದ್ದಾರೆ.
ನಗರ ಸಭೆಯಿಂದ ವೇತನ ದೊರೆಯದ ಹಿನ್ನೆಲೆ ಕುಟುಂಬ ನಿರ್ವಹಣೆ ಸಂಕಷ್ಟ ಎದುರಿಸುತ್ತಿದ್ದ ಅಸ್ಟರ್,
ವೇತನ ವಿಳಂಬಕ್ಕೆ ಬೇಸತ್ತು ಮನೆಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.