ಇಳಕಲ್ ನಗರಸಭೆಯ ನೂತನ ಪೌರಾಯುಕ್ತರಾಗಿ ರಾಜಾರಾಮ ಶಿವಾಜಿ ಪವಾರ ಗುರುವಾರದಂದು ಸಾಯಂಕಾಲ ೫ ಗಂಟೆಗೆ ಅಧಿಕಾರ ಸ್ವೀಕರಿಸಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಲ್ಲಿನ ಪೌರಾಯುಕ್ತ ಶ್ರೀನಿವಾಸ ಜಾಧವ ಅವರನ್ನು ದಾಂಡೇಲಿ ನಗರಸಭೆಗೆ ವರ್ಗಾಯಿಸಲಾಗಿದ್ದು ಅಲ್ಲಿ ಕರ್ತವ್ಯದಲ್ಲಿ ಇದ್ದ ರಾಜಾರಾಮ ಪವಾರ ಅವರನ್ನು ಇಲ್ಲಿಗೆ ವರ್ಗಾಯಿಸಲಾಗಿದೆ.
ನಗರದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದಾಗಿ ಭೇಟಿಯಾದ ಪತ್ರಕರ್ತರಿಗೆ ಪವಾರ ತಿಳಿಸಿದರು
.