
Ramanujacharya’s ಸಂಭ್ರಮದಿಂದ ಜರುಗಿದ ರಾಮಾನುಜಾಚಾರ್ಯರ ೧೦೦೭ ನೇ ಜಯಂತ್ಯೋತ್ಸವ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಮಾರವಾಡಿ ಗಲ್ಲಿಯಲ್ಲಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ರಾಮಾನುಜಾಚಾರ್ಯರ ೧೦೦೭ ನೇ ಜಯಂತಿಯನ್ನು ರವಿವಾರದಂದು ಮುಂಜಾನೆ ೧೧ ಗಂಟೆಗೆ ಸಂಭ್ರಮದಿಂದ ಆಚರಿಸಲಾಯಿತು.
ರಾಮಾನುಜಾಚಾರ್ಯರ ಭಾವಚಿತ್ರದ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ಮಾಡಿ ನಂತರ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು.
ಮೆರವಣಿಗೆಯಲ್ಲಿ ಡಾ.ಪವನ ದರಕ, ಪುರುಷೋತ್ತಮ ದರಕ ಘನಶ್ಯಾಮಜಿ ದರಕ, ರಾಜಗೋಪಾಲ ದರಕ, ಜುಗಲಕಿಶೋರ ದರಕ,
ಮನೋಹರ್ ಕರವಾ, ಲಕ್ಷ್ಮಿಕಾಂತ ಕರವಾ, ವಸಂತ ಆಸಾವಾ, ರಮೇಶ ದರಕ, ರಮಾಕಾಂತ ದರಕ, ಪವನ ಕರವಾ, ನವನೀತ ದರಕ, ಭರತ ಲಾಹೋಟಿ ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)