ರಂಜಾನ್ ಮಾಸದ ಪ್ರಯುಕ್ತ : ಇಳಕಲ್ ಯೂನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯಿ0ದ ಇಫ್ತಾರ ಕೂಟ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಯೂನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯ ಶುಕ್ರವಾರದಂದು ರಂಜಾನ್ ಮಾಸದ ಪ್ರಯುಕ್ತ ಶುಕ್ರವಾರದಂದು ನಗರದ ಕುಲಕರ್ಣಿ ಪೇಟೆಯಲ್ಲಿ ಇಫ್ತಾರ ಕೂಟವನ್ನು ಏರ್ಪಡಿಸಿದ್ದರು.
ಯೂನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯ ಅಧ್ಯಕ್ಷ ರಾಜು ಇಳಕಲ್ ಮಾತನಾಡಿ ರಂಜಾನ್ ಮಾಸ ಮುಸ್ಲಿಂ ಬಾಂಧವರು ಪವಿತ್ರವಾದ ಹಬ್ಬವಾಗಿದ್ದು ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರು ಉಪವಾಸ ವೃತ್ತವನ್ನು ಮಾಡಿ ದೇವರಒಳಗಾಗುತ್ತಾರೆ ಇಂತಹ ಹಬ್ಬದಲ್ಲಿ ಪ್ರಸಾವ ಸೇವೆಯನ್ನು ಪ್ರತಿ ವರ್ಷ ಮಾಡುತ್ತಾ ಸಾಗುತ್ತೇವೆ ಎಂದು ಹೇಳಿದರು.
ಈ ಸಮಯದಲ್ಲಿ ಕಾರ್ಯದರ್ಶಿ ಮಹಾಂತೇಶ್ ಹಿರೇಮಠ, ಸಂಸ್ಥೆಯ ಸರ್ವ ಸದಸ್ಯರು, ಹಾಗೂ ಕುಲಕರ್ಣಿ ಪೇಟೆಯ ಸಮಸ್ತ ಹಿರಿಯರು, ಯುವಕರು,ಮಹಿಳೆಯರು ಉಪಸ್ಥಿತರಿದ್ದರು.