ಸಡಗರದಿಂದ ನಡೆದ ರಾಘವೇಂದ್ರ ಸ್ವಾಮಿಗಳ ರಥೋತ್ಸವ
ಇಳಕಲ್ : ಗುರುವಾರದಂದು ಉತ್ತರಾಧನೆ ದಿನದಂದು ಇಲ್ಲಿನ ಕೂಡಲಸಂಗಮ ಕಾಲೋನಿಯ
ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥೋತ್ಸವ ಸಡಗರ ಸಂಭ್ರಮದಿAದ ನಡೆಯಿತು.
ರಾಯರ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕ ವೆಂಕಟೇಶಾಚರ್ಯ ಶೆಡ್ಲಗೇರಿ
ಮಹಾಪೂಜೆಯನ್ನು ನೆರವೇರಿಸಿದ ನಂತರ ರಥವನ್ನು ಎಳೆದು ಭಕ್ತರು ಸಂಭ್ರಮಪಟ್ಟರು.
ಶಂಕರ ಸರಾಫ್, ಸಿದ್ದರಾಮೇಶ ಸರೂರ , ರಮೇಶ ಕಠಾರೆ, ಸತ್ಯನಾರಾಯಣ ಅರಳಿಹಳ್ಳಿ.
ನಗರಸಭೆ ಮಾಜಿ ಅಧ್ಯಕ್ಷೆ ವೈಶಾಲಿ ಘಂಟಿ ಸೇರಿದಂತೆ ಹಲವಾರು ಭಕ್ತರು ಭಾಗವಹಿಸಿದ್ದರು.