Renukayacharya ರೇಣುಕಾಯಚಾರ್ಯರು ಸರ್ವ ಸಮಾಜದ ಆದಿ ಜಗದ್ಗುರುಗಳು : ಉಪತಹಸೀಲ್ದಾರ ಈಶ್ವರ ಗಡ್ಡಿ
ಇಳಕಲ್ : ಆದಿ ಜಗದ್ಗುರು ರೇಣುಕಾಚಾರ್ಯರು ಎಲ್ಲ ಸಮಾಜದ ಬಾಂಧವರಿಗೆ ಒಳಿತನ್ನು ಮಾಡುವ ಹಂಬಲವುಳ್ಳವರಾಗಿದ್ದರು. ಯಾವುದೇ ಜಾತಿ ಭೇದ ತಾರತಮ್ಯವನ್ನು ಮಾಡುತ್ತಿರಲಿಲ್ಲ. “”ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಾನವ ಧರ್ಮಕ್ಕೆ ಜಯವಾಗಲಿ”” ಎಂದವರು ರೇಣುಕಾಯಚಾರ್ಯರು ಸರ್ವ ಸಮಾಜದ ಆದಿ ಜಗದ್ಗುರುಗಳು ಎಂದು ಉಪತಹಸೀಲ್ದಾರ ಈಶ್ವರ ಗಡ್ಡಿ ಹೇಳಿದರು.
ತಹಸೀಲ್ದಾರ ಕಚೇರಿಯಲ್ಲಿ ಬುಧವಾರದಂದು ಜಂಗಮ ಕ್ಷೇಮಾಭಿವೃದ್ಧಿ ಸಂಘ ಮತ್ತು ತಾಲೂಕಾ ಆಡಳಿತ ಸಂಯುಕ್ತ ಆಶ್ರಯದಲ್ಲಿ ನಡೆದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ವಿಜಯ ಹಿರೇಮಠ ಮಾತನಾಡಿ ಜಗದ್ಗುರು ರೇಣುಕಾಚಾರ್ಯ ರಚಿಸಿದ “”ಸಿದ್ಧಾಂತ ಶಿಖಾಮಣಿ””ಯನ್ನು ಪ್ರತಿಯೊಬ್ಬರು ಪಠಿಸಬೇಕು ಕೇವಲ ಜಂಗಮರು ಮಾತ್ರ ರೇಣುಕಾ ಜಯಂತಿಯನ್ನು ಮಾಡದೆ ಸರ್ವ ಸಮಾಜದವರು ಮಾಡುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಜಯಂತ್ಯೋತ್ಸವದಲ್ಲಿ ಜಂಗಮ ಸಮಾಜ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಪ್ರಭು ಬನ್ನಿ ಗೋಳ ಮಠ, ಸಂಗಯ್ಯ ನಾಗಯ್ಯನವರ್, ಪಂಪಾಪತಿ ಸರಗಣಚಾರಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಮಠದ ಹಾಗೂ ತಹಸಿಲ್ದಾರ್ ಕಾರ್ಯಾಲಯದ ಆಡಳಿತ ಸಿಬ್ಬಂದಿ ವರ್ಗದವರು ಇದ್ದರು.
ಕಾರ್ಯಕ್ರಮಕ್ಕೂ ಮುಂಚೆ ರೇಣುಕಾಚಾರ್ಯರ ಮಂದಿರದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರಿಗೆ ಅಭಿಷೇಕ ಹಾಗೂ ಮಂತ್ರ, ಪಠಣ ಪೂಜಾ ವಿಧಾನವನ್ನು ಮಾಡಿ ನಂತರ ರೇಣುಕಾಚಾರ್ಯರ ವೃತ್ತಕ್ಕೆ ಹೂಮಾಲೆ ಅರ್ಪಿಸಿದರು.