Request submitted ಹೊರಗುತ್ತಿಗೆ ನೌಕರರ ಸಮಸ್ಯೆ ಕುರಿತು ಸದನದಲ್ಲಿ ಚರ್ಚಿಸುವಂತೆ ಶಾಸಕರಿಗೆ ಮನವಿ ಸಲ್ಲಿಕೆ
ಇಳಕಲ್ಲ : ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಸೂಕ್ಷ್ಮ ಇಲಾಖೆಗಳಾದ ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸುಮಾರು ೨೫,೦೦೦ ಕ್ಕೂ ಅಧಿಕ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು,
ನೌಕರರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು ನಮ್ಮ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸುವ ಸಲುವಾಗಿ ಸದನದಲ್ಲಿ ಚರ್ಚಿಸುವ ಮೂಲಕ ನಮ್ಮ ನೌಕರರಿಗೆ ನ್ಯಾಯ ಕೊಡಿಸಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಹುನಗುಂದ ಆರೋಗ್ಯ ಇಲಾಖೆ ಯ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಕಾಂಬಳೆ ಮನವಿ ಸಲ್ಲಿಸಿದರು.
ಪ್ರಮುಖ ಬೇಡಿಕೆಗಳಾದ ನೇರಪಾವತಿ ವ್ಯವಸ್ಥೆ ಜಾರಿಗೆ ತರುವುದು, ಹೊರಗುತ್ತಿಗೆ ಪದ್ದತಿ ಬದಲಾಗಿ ಒಳಗುತ್ತಿಗೆ ಪದ್ಧತಿಗೆ ಸೇರಿಸುವುದು,ಸುಪ್ರೀಂ ಕೋರ್ಟ್ ಸೂಚನೆಯಂತೆ ಸದರಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕೃಪಾಂಕ ನೀಡಿ ಖಾಯಂಗೊಳಿಸುವುದು,
ಸೇವಾಭದ್ರತೆ ನೀಡಲು ಕ್ರಮವಹಿಸಬೇಕು. ಇಂದಿನ ಜೀವನಮಟ್ಟಕ್ಕೆ ಆನುಗುಣವಾಗಿ ಕನಿಷ್ಠ ವೇತನ ಪರಿಷ್ಕರಿಸಿ ೨೫,೦೦೦ ನಿಗಧಿಪಡಿಸಬೇಕು ಎಂದು ಹೇಳಿದರು. ಈ ಸಮಯದಲ್ಲಿ ಶ್ರೀಶೈಲ ಆನೆಹೊಸೂರ, ವೆಂಕಟೇಶ, ಬಾಲಪ್ಪ, ರಫೀಕ್, ದೇವರಾಜ, ನಾಗರಾಜ,ವಿಜಯ,ಭೀಮು,ನವೀನ್, ಪ್ರವೀಣ ಇದ್ದರು.






