HUNGUND Request to provide more bus facilities ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿ

WhatsApp Group Join Now
Telegram Group Join Now
Instagram Group Join Now
Spread the love

 HUNGUND Request to provide more bus facilities ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿ

HUNGUND  ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿ

ಹುನಗುಂದ: ಹುನಗುಂದ ಬಸ್ ಘಟಕದಿಂದ ಹುನಗುಂದ-ಮ್ಯಾಗೇರಿ ಮಾರ್ಗದಲ್ಲಿ ಸರ್ಮಕವಾಗಿ ಹೆಚ್ಚಿನ ಬಸ್ ಸೌಲಭ್ಯೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಂದ ಸೋಮವಾರ ಹುನಗುಂದ ಬಸ್ ಘಟಕದ ವೈವಸ್ಥಾಪಕ ಅರವಿಂದ ಭಜಂತ್ರಿಯವರಿಗೆ ಸೋಮವಾರ ಮನವಿ ನೀಡಿದರು.

ಕರವೇ ಕೂಡಲ ಸಂಗಮದ ಗ್ರಾಮ ಘಟಕದ ಅಧ್ಯಕ್ಷ ಸಂಜಯಗೌಡ ಗೌಡರ ಮಾತನಾಡಿ ಕೂಡಲಸಂಗಮ ಸರ್ಕಾರಿ ಪೌಢಶಾಲೆಯಲ್ಲಿ ಒಟ್ಟು ೫೨೮ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಬೇರೆ ಬೇರೆ ಹಳ್ಳಿಗಳಿಂದ ವಿದ್ಯಾರ್ಥಿಗಳು ನಿತ್ಯ ಕೂಡಲಸಂಗಮಕ್ಕೆ ಬರುತ್ತಿದ್ದು, ಬೆಳಿಗ್ಗೆ ಶಾಲೆಯ ೧೦ ಗಂಟೆಗೆ ಆರಂಭವಾಗುತ್ತದೆ.

ಸಾಯಂಕಾಲ ೪.೨೦ ಗಂಟೆಗೆ ಶಾಲೆಯು ಬಿಡುತ್ತಿರುವುದರಿಂದ ಇಗಾಗಲೇ ಒಂದು ಬಸ್ ಬರುತ್ತಿದ್ದು ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇರುವದರಿಂದ ಆದ್ದರಿಂದ ಇನ್ನೊಂದು ಹುನಗುಂದ-ಮ್ಯಾಗೇರಿ ಹೆಚ್ಚುವರಿ ಬಸ್ ನೀಡಬೇಕು.

 HUNGUND Request to provide more bus facilities ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿಇಲ್ಲವಾದರೆ ಒಂದೇ ಬಸ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಚರಿಸುವ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಘಟಕ ವ್ಯವಸ್ಥಾಪಕರೇ ನೇರ ಹೊಣೆಯಾಗಿರುತ್ತಿದ್ದು ಅದ್ದರಿಂದ ಕೂಡಲೇ ಹೆಚ್ಚುವರೆ ಬಸ್ ಬಿಡಬೇಕು ಇಲ್ಲವಾದರೆ ಕರವೇ ಘಟಕದಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಕರವೇ ಘಟಕದ ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಕೂಡಲ ಸಂಗಮದÀ ಗ್ರಾಮಘಟಕದ ಉಪಾಧ್ಯಕ್ಷ ಮಂಜು ವಡ್ಡರ, ಸೋಹಿಲ್ ಸುತಾರ, ಪ್ರವೀಣ ವಾಲೀಕಾರ, ರವಿ ಕೊಪ್ಪದ, ಸಂಗಮೇಶ ಗೌತಗಿ,ಕಿರಣ ವಡ್ಡರ, ದಶರಥ ವಡ್ಡ, ಸದ್ದಾಂ ಕಲಾಲ ಸೇರಿದಂತೆ ಇತರರು ಇದ್ದರು.


Spread the love

Leave a Comment

error: Content is protected !!