MLA Kashappanavara ಎಸ್ ಸಿ ಜನಾಂಗದ ಉದ್ದಾರಕ್ಕೆ ಮೀಸಲಾತಿ ಅಗತ್ಯ : ಶಾಸಕ ಕಾಶಪ್ಪನವರ
ಇಳಕಲ್ : ಈ ದೇಶದಲ್ಲಿ ಇರುವ ಎಸ್ ಸಿ ಜನಾಂಗದ ಉದ್ದಾರಕ್ಕಾಗಿ ಮೀಸಲಾತಿ ಯನ್ನು ಮುಂದುವರೆಸುವದು ಅಗತ್ಯವಾಗಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ರಾಜ್ಯ ಸತ್ಯಶೋಧಕ ಸಂಘದ ತಾಲೂಕಾ ಘಟಕದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ‘ ಮೀಸಲಾತಿ ಮುಂದುವರೆಕೆ ಮತ್ತು ಅದರ ಪರಿಣಾಮಗಳು ‘ ಎಂಬ ವಿಷಯದ ಮೇಲೆ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಎಸ್ ಸಿ ಜನಾಂಗದ ಜನತೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವ ಉದಾಹರಣೆಗಳು ಇದ್ದು ಅಂತಹ ಜನತೆಗಾಗಿ ಮೀಸಲಾತಿ ಅತ್ಯಗತ್ಯ ಎಂದು ಹೇಳಿದರು.
ವಿಚಾರ ಸಂಕಿರಣದ ಪ್ರಮುಖ ಉಪನ್ಯಾಸ ನೀಡಿದ ಬಾಗಲಕೋಟೆಯ ಪರಶುರಾಮ ಮಹಾರಾಜನವರ ತಲೆ ತಲಾಂತರದಿAದ ಎಸ್ ಸಿ ಜನತೆಯನ್ನು ತುಳಿಯುತ್ತಾ ಹೋಗುವ ಪ್ರಕರಣಗಳು ನಡೆಯುತ್ತಲೇ ಇವೆ ಅದಕ್ಕಾಗಿ ಆ ಜನಾಂಗಕ್ಕೆ ಮೀಸಲಾತಿ ಅಗತ್ಯವಾಗಿದೆ ಎಂದು ಹೇಳಿದರು
ಇದೇ ಸಮಯದಲ್ಲಿ ವಜ್ಜಲ ಗ್ರಾಮದ ಲೇಖಕ ಸಿತೀಮಾ ಬರೆದ ಜಗವೆತ್ತ ಸಾಗುತಿದೆ ಕೃತಿಯನ್ನು ವೇದಿಕೆಯ ಮೇಲಿದ್ದ ಗಣ್ಯರು ಬಿಡುಗಡೆ ಮಾಡಿದರು.
ಅಂಬೇಡ್ಕರ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶರಣಪ್ಪ ಆಮದಿಹಾಳ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಸಾನಿಧ್ಯವನ್ನು ನಂದವಾಡಗಿ ಮಹಾಂತಲಿAಗ ಮಠದ ಡಾ ಚನ್ನಬಸವ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ ,ವಿಜಯ ಗದ್ದನಕೇರಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ ಅಮೃತ ಬಿಜ್ಜಳ ಮೌಲಪ್ಪ ಬಂಡಿವಡ್ಡರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)