ಪ್ರವಾಹ ಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ಪರಿಶೀಲನೆ
ರಾಜ್ಯದಲ್ಲಿ ಮಲೆನಾಡು, ಅರೇ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ವಾಡಿಕೆಗ್ಗಿಂತ ಶೆ.೨೬ ರಷ್ಟು ಮಳೆ ಜಾಸ್ತಿ ಆಗಿದೆ.
ಹಲವಾರು ವರ್ಷಗಳಿಂದ ಪ್ರವಾಹದಿಂದ ನರಳುತ್ತಿವೆ. ಅಂಹ ಗ್ರಾಮಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರದ
ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ತಾಲೂಕಿನ ಯಾದವಾಡ ಬ್ರೀಡ್ಜಗೆ ಭೇಟಿ ನೀಡಿ ಘಟಪ್ರಭಾ ನದಿ ಪ್ರವಾಹ ವೀಕ್ಷಿಸಿ ಮಾಧ್ಯಮದೊಂದಿಗೆ ಮತನಾಡಿದ ಅವರು,
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರೊಂದಿಗೆ ಪ್ರವಾಹ ಪೀಡಿತ ಗ್ರಾಮಗಳ ಶಾಶ್ವತ ಪರಿಹಾರದ ಕುರಿತು ಚರ್ಚೆ ನಡೆಸಲಾಗುವುದು.
ಪ್ರವಾಹ ಪೀಡಿತ ಗ್ರಾಮಗಳನ್ನು ಒಂದೇ ಬಾರಿಗೆ ಸ್ಥಳಾಂತರಿಸುವುದು ಕಷ್ಟಸಾಧ್ಯ. ಹಂತ ಹಂತವಾಗಿ ಮಾಡಬೇಕಿದೆ.
ಇದಕ್ಕೆ ರೈತರು ಭೂಮಿ ನೀಡಲು ಮುಂದಾಗಬೇಕು.
ಸರ್ಕಾರದ ನಿಯಮಾವಳಿ ಬಿಟ್ಟು ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆ ದರದಲ್ಲಿ ಭೂಮಿ ಖರೀದಿಸಲು ಸಾಧ್ಯವಿಲ್ಲ.
ಎಲ್ಲದಕ್ಕೂ ಅಂತಿಮ ಸ್ವರೂಪ ನೀಡಬೇಕಿದೆ ಎಂದರು.