ಕೃಷ್ಣಾ ನದಿಗೆ ಹೆಚ್ಚಿದ ನೀರು: ಜನರು ಎಚ್ಚರಿಕೆಯಿಂದಿರಲು ತಹಸೀಲ್ದಾರ ಸೂಚನೆ
ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹೊರ ಬೀಡುತ್ತಿರುವುದರಿಂದ ತಾಲ್ಲೂಕಿನ
ಧನ್ನೂರು ಗ್ರಾಮದ ಸೇತುವೆ ಬಳಿ ಕೃಷ್ಣ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ಜನರು ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಈಗಾಗಲೇ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ
ಸಭೆ ನಡೆಸಿ ತಾಲ್ಲೂಕಿನ ಎರಡು ನದಿ ತೀರದ ಜನರಿಗೆ ಪ್ರವಾಹ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದು
ಹುನಗುಂದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ತಿಳಿಸಿದ್ದಾರೆ.






