ಇಳಕಲ್ ತಾಲೂಕಿನಲ್ಲಿ ಅಬ್ಬರಸಿ ಬೊಬ್ಬಿರದ ರೋಹಿಣಿ ಮಳೆ !
ಇಳಕಲ್: ಒಂದು ವಾರದ ರಜೆಯ ನಂತರ ರೋಹಿಣಿ ಮಳೆ ಸೋಮವಾರದಂದು ಬೆಳಿಗ್ಗೆ ತಾಲೂಕಿನಲ್ಲಿ ಅಬ್ಬರಸಿ ಬೊಬ್ಬಿರಿದಿದೆ.
ಬೆಳಿಗ್ಗೆ ಸುಮಾರು ಒಂದು ಗಂಟೆಗೆ ಆರಂಭವಾದ ಮಳೆ ಸಿಕ್ಕಾಪಟ್ಟೆ ಸುರಿದಿದೆ ಹೀಗಾಗಿ ನಗರದ ಬಹುತೇಕ ರಸ್ತೆಗಳು ನೀರಿನಿಂದ ತುಂಬಿಕೊAಡಿವೆ ತೆಗ್ಗು ಪ್ರದೇಶದಲ್ಲಿ ಇದ್ದ ಮನೆಗಳಲ್ಲಿ ನೀರು ಹೊಕ್ಕು ಜನಜೀವನ ಅಸ್ತವ್ಯಸ್ತಗೊಂಡಿದೆ.
ಅದರಲ್ಲಿಯೂ ನಗರದ ಹಿರೇಹಳ್ಳ ತುಂಬಿ ಹರಿದಿದ್ದು ಜನರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೋಹಿಣಿ ಮಳೆಯ ಅರ್ಭಟ ಜೋರಾಗಿದೆ.ಹಳ್ಳಕೊಳ್ಳಗಳು ನೀರಿನಿಂದ ತುಂಬಿಕೊAಡು ಹೆಚ್ಚಾದ ನೀರು ಜಮೀನುಗಳಲ್ಲಿ ಹೊಕ್ಕಿದೆ ಇದರಿಂದಾಗಿ ಇತ್ತೀಚೆಗೆ ಬಿತ್ತಿದ ಜಮೀನುಗಳಲ್ಲಿನ ಬೆಳೆಗಳು ನೀರುಗುಂಟ ಹರಿದು ಹೋಗಿವೆ.
ಹಳ್ಳದ ನೀರು ಒಡ್ಡು ಒಡೆದು ಹೊಲದಲ್ಲಿ ನೀರು ಹರಿದ ಕಾರಣ ಹೊಲಗಳು ಕೆರೆಯಂತಾಗಿದೆ ಹೆಚ್ಚು ಹಣ ತೆತ್ತು ತಂದ ತೊಗರಿ ಹೆಸರು ಬೀಜಗಳು ನೀರಿನಲ್ಲಿಯೇ ತೇಲಿ ಹೋಗಿವೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೋಡಿಹಾಳ ಮತ್ತ ಕರಡಿ ಗ್ರಾಮದ ಬ್ರೀಜ್ ಮಳೆನೀರಿನಿಂದ ತುಂಬಿ ಹರಿಯುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡತಡೆ ಉಂಟಾಗಿದ್ದರಿAದ ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣಾಗಿತ್ತು.