S. D. M. C. ಎಸ್. ಡಿ. ಎಮ್. ಸಿ. ಹಾಗೂ ಶಿಕ್ಷಕರ ಕಾರ್ಯ ಶ್ಲಾಘನಿಯ: ಶಾಂತಕುಮಾರ ಕುಟಗಮರಿ
ಕಂದಗಲ್ಲ: ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಶಾಲೆ ಹಲವು ಬದಲಾವಣೆಗಳೊಂದಿಗೆ ಹೆಜ್ಜೆ ಇಡುತ್ತಿರುವುದು ಬಹಳ
ಸಂತಸದ ವಿಷಯ ಇದಕ್ಕೆ ಶ್ರಮಿಸಿದ ಶಾಲೆಯ ಗುರುಗಳು ಮತ್ತು ಎಸ್. ಡಿ. ಎಮ್. ಸಿ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ
ಎಲ್ಲ ಸದಸ್ಯರುಗಳ ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದು ನಂದವಾಡಗಿ ಕ್ಲಸ್ಟರ್, ನ,
ಸಿ ಆರ್ ಪಿ ಗಳಾದ, ಶಾಂತಕುಮಾರ ಕುಟಗಮರಿ ಹೇಳಿದರು.
ಕಂದಗಲ್ಲ ಗ್ರಾಮದ ಕೆ. ಬಿ. ಎಚ್. ಪಿ. ಎಸ್ ನಂ – ೨ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ
೭ನೆಯ ತರಗತಿ ವಿಧ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಗ್ರಾಮದ ಯುವ ಧಣಿಗಳಾದ ರಾಹುಲ್ ಚನ್ನಪ್ಪಗೌಡ ನಾಡಗೌಡ್ರ ಉದ್ಘಾಟಿಸಿ
ಶಾಲೆಯ ಪ್ರಗತಿಯ ಹೆಜ್ಜೆಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್. ಡಿ. ಎಮ್. ಸಿ ಅಧ್ಯಕ್ಷ ಶರಣಪ್ಪ ಬಳಿಗಾರ ವಹಿಸಿದ್ದರು.
ಗ್ರಾಮದ ಹಿರಿಯರಾದ ಪಂಪಣ್ಣ ಸಜ್ಜನ್ ಅವರು ಮಾತನಾಡಿ ಶಾಲಾ ಮಕ್ಕಳ ದಾಖಲಾತಿ ಹೆಚ್ಚಿಸಲು ಸೂಕ್ತ
ಸಲಹೆ ನೀಡಿದರು. ಶಿಕ್ಷಣ ಪ್ರೇಮಿಗಳಾದ ರುದ್ರಗೌಡ ಪಾಟೀಲ,ಮಾತನಾಡಿ ಶಾಲೆಯ ಸರ್ವ ಅಭಿವೃದ್ಧಿ .
ಶಿಕ್ಷಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಗ್ರಾಮದ ಹಿರಿಯರಾದ ಶರಣಯ್ಯ ಮಠ,
ಅಮರಪ್ಪ ಗೆಜ್ಜೆಲಗಟ್ಟಿ,ರುದ್ರಪ್ಪ ಶೀಲವಂತರ, ಚಂದ್ರಶೇಖರ ಬಸರಗಿಡದ,ಸಂಜೀವಪ್ಪ ಗೋಧಿ, ಕೆ ಜಿ ಎಸ್ ಶಾಲೆಯ
ಮಹಾಂತೇಶ ಪುರದನ್ನವರ, ದೇವಿಕಾ ಮಳಗೌಡರ,ಶಿವಪ್ಪ ಚಲವಾದಿ,ಸೇರಿದಂತೆ ಎಸ್ ಡಿ ಎಂ ಸಿ, ಉಪಾಧ್ಯಕ್ಷರು,
ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ವ ಅತಿಥಿ ಮಹೋದಯರಿಗೆ ಶಾಲೆಯ ಎಸ್. ಡಿ. ಎಮ್. ಸಿ ಮಂಡಳಿ ಮತ್ತು
ಶಾಲಾ ಗುರುವೃoದ ಸನ್ಮಾನಿಸಿತು. ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆಯರಾದ ಎಸ್. ಎಸ್ ಪುಟ್ಟಿ ಯವರು ಕಾರ್ಯಕ್ರಮದ
ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಸಹ ಶಿಕ್ಷಕಿಯರಾದ ಎಸ್ ಆಯ್ ಪರೂತಿ, ವರದಿ ವಾಚನ ಮಾಡಿದರು.
ಎಮ್.ಎ ಬನ್ನಟ್ಟಿ ಗುರುಗಳು ಸ್ವಾಗತಿಸಿದರು ಹಾಗೂ ಟಿ. ಎನ್ ಶೀಲವೆರಿ ನಿರೂಪಿಸಿದರು. ಪಿ ಜೆ ರಾಮದುರ್ಗ ವಂದಿಸಿದರು
ಸಮಾರಂಭದಲ್ಲಿ,ಮಕ್ಕಳ ಮನರಂಜನೆ, ಸಾoಸ್ಕೃತಿಕ ಕಾರ್ಯಕ್ರಮಗಳನ್ನು, ಹಮ್ಮಿಕೊಳ್ಳಲಾಗಿತ್ತು .