ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ ಎಸ್.ಆರ್.ನವಲಿಹಿರೇಮಠ
ಬಾಗಲಕೋಟ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣೆ, ಮಲಪ್ರಭೆ, ಘಟಪ್ರಭೆ ಮೂರು ನದಿಗಳು ಕೂಡಿರುವ ತ್ರಿವೇಣಿ ಸಂಗಮದಲ್ಲಿ ಎಸ್‌ಆರ್‌ಎನ್‌ಇ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಮಾಜ ಸೇವಕ ಎಸ್.ಆರ್.ನವಲಿಹಿರೇಮಠ ಬಾಗಿನ ಅರ್ಪಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಈ ಬಾರಿಯೂ ಸಂಗಮ ಭಾಗದಲ್ಲಿ ನದಿ ನೀರು ತುಂಬಿ ತುಳುಕುತ್ತಿದ್ದು ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.
ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯದಿಂದ ಬಂದತ ನೀರು ನಮ್ಮ ತ್ರಿವೇಣಿ ಸಂಗಮಕ್ಕೆ ಬರುವದ್ದರಿಂದ ನಾವು ಪುಣ್ಯವಂತರು ಅದಕ್ಕಾಗಿ ಬಾಗಿನವನ್ನು ಅರ್ಪಿಸಿ ಉತ್ತಮ ಬೆಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ, ಎಲ್ಲ ಜನರಿಗೂ ಒಳ್ಳೆದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮೊದಲು ಕೂಡಲಸಂಗಮನಾಥನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಆಶೀರ್ವಾದವನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಬಸವರಾಜ ತಾಳಿಕೋಟಿ, ಎಂ,ಎನ್,ಪಾಟೀ, ಎಂ,ಎಸ್,ಪಾಟೀಲ, ಬಸವರಾಜ ಹೆಸರೂರ, ಮಲ್ಲಿಕಾರ್ಜುನ ಕರಡಿ ಸೇರಿದಂತೆ ತಾಲೂಕಿನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಭೀಮಣ್ಣ ಗಾಣಿಗೇರ ಬಾಗಿನ ಅರ್ಪಣೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ