Samyukta Patil and MLA Kashappanavar canvassed for their votes through a road show for huge supporters ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಮತಯಾಚಿಸಿದ ಸಂಯುಕ್ತಾ ಪಾಟೀಲ್ ಹಾಗೂ ಶಾಸಕ ಕಾಶಪ್ಪನವರ್

WhatsApp Group Join Now
Telegram Group Join Now
Instagram Group Join Now
Spread the love

Samyukta Patil and MLA Kashappanavar canvassed for their votes through a road show for huge supporters

ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಮತಯಾಚಿಸಿದ ಸಂಯುಕ್ತಾ ಪಾಟೀಲ್ ಹಾಗೂ ಶಾಸಕ ಕಾಶಪ್ಪನವರ್

 

೨೦೨೪ ರ ಲೋಕಸಭಾ ಚುನಾವಣೆಯ ಪ್ರಚಾರ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹೌದು ಬಾಗಲಕೋಟ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಕರ್ನಾಟಕ ಮತ್ತು ಹುನಗುಂದ ಮತಕ್ಷೇತದ ಶಾಸಕ ವಿಜಯಾನಂದ ಕಾಶಪ್ಪನವರ ಬುಧವಾರ ರಾತ್ರಿ ಅಪಾರ ಬೆಂಬಲಿಗರೊAದಿಗೆ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಬಿರುಸಿನ ಮತಯಾಚನೆ ನಡೆಸಿದರು.
ನಗರದ ಕಂಠಿ ಸರ್ಕಲ್ ದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ತೆರೆದ ವಾಹನದಲ್ಲಿ ಜನರಿಗೆ ಕೈ ಬೀಸುತ್ತಾ ಕೈ ಮುಗಿಯುತ್ತಾ ಪ್ರಚಾರ ಪ್ರಾರಂಭಿಸಿ ಮಾತನಾಡಿದ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಇಳಕಲ್ ನಗರದಲ್ಲಿ ಈಗ ಸೇರಿರುವ ಜನಗಳನ್ನು ನೋಡಿದರೆ ಇದು ಬಾಗಲಕೋಟೆಯ ಗೆಲುವಿನ ರಣಕಹಳೆಯನ್ನು ಇಳಕಲ್ ದಿಂದ ಕೂಗಿದ್ದೇವೆ, ಬರುವಂತಹ ದಿನಮಾನಗಳಲ್ಲಿ ನಾವೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ದುಡಿದು ಕರ್ನಾಟಕ ರಾಜ್ಯದಲ್ಲಿ ನಮ್ಮ ನಾಯಕರು ಕೊಟ್ಟಿರುವಂತ ಗ್ಯಾರಂಟಿಗಳು ಪ್ರತಿಯೊಬ್ಬ ಮಹಿಳೆ ಪ್ರತಿಯೊಬ್ಬ ಯುವಕನಿಗೆ ಅನುಕೂಲವಾಗಿರುವಂತಹ ಗ್ಯಾರಂಟಿಗಳು, ಪ್ರತಿಯೊಂದು ಬಡ ಕುಟುಂಬಗಳಿಗೆ ಕೈ ಹಿಡಿದಿರುವಂತಹ ಗ್ಯಾರಂಟಿಗಳು ಈ ಗ್ಯಾರಂಟಿಗಳು ಕರ್ನಾಟಕ ರಾಜ್ಯದ ಜನರಿಗೆ ಸ್ವಾಭಿಮಾನಿ ಜೀವನವನ್ನು ನಡೆಸಲು ದಾರಿಯನ್ನು ತೋರಿಸಿದೆ. ಈ ಗ್ಯಾರಂಟಿಗಳನ್ನು ಭದ್ರ ಬುನಾದಿಯಾಗಿ ಇಟ್ಟುಕೊಂಡು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ದುಡಿದು ಕರ್ನಾಟಕ ರಾಜ್ಯದಲ್ಲಿ ಕಂಬಳಿಯನ್ನು ಹಾರಿಸೋಣ ಎಂದು ಹೇಳಿದರು.
ನಿಮ್ಮ ಸಹೋದರಿಯಾಗಿ ನಿಮ್ಮ ಮಗಳಾಗಿ ನೀವು ನನ್ನಗೆ ಒಂದು ಅವಕಾಶವನ್ನು ಮಾಡಿಕೊಡಬೇಕು ನೀವು ಅವಕಾಶ ಮಾಡಿಕೊಟ್ಟರೆ ನಿರಂತರವಾಗಿ ನಿಮ್ಮ ಜೀತದ ಹಾಳಾಗಿ ದುಡಿದು ಋಣವನ್ನು ತೀರಿಸುತ್ತೇನೆ, ನನ್ನ ಗುರುತು ಹಸ್ತ ಶಾಸಕ ವಿಜಯಾನಂದ ಕಾಶಪ್ಪನವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಅವರ ಕ್ರಮ ಸಂಖ್ಯೆಯು ಮೂರಾಗಿತ್ತು ನನ್ನದು ಮೂರು ಇದೆ ಅಣ್ಣಾವ್ರ ಹಾಗೆಯೇ ನನ್ನನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಬಾವುಟವನ್ನು ಆರಿಸೋಣ ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಸಂಯುಕ್ತಾ ಪಾಟೀಲ್ ನನ್ನ ಸಹೋದರಿ ನಿಮ್ಮೆಲ್ಲರ ಮತವನ್ನು ನನ್ನ ಸಹೋದರಿಗೆ ಹಾಕಿ ಹೆಚ್ಚಿನ ಮತಗಳ ಅಂತರದಿAದ ನಾವು ನೀವೆಲ್ಲರೂ ಗೆಲ್ಲಿಸೋಣ ಎಂದು ಹೇಳಿದರು.
ಕಂಠಿ ಸರ್ಕಲ್ ದಿಂದ ಆರಂಭವಾದ ರೋಡ್ ಶೋ ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ, ಬಜಾರ ಬಸವನ ಗುಡಿ, ಕೊಪ್ಪರದ ಪೇಟೆ, ಪಶು ಆಸ್ಪತ್ರೆ, ಬನ್ನಿಕಟ್ಟಿ, ಪೋಲಿಸ್ ಬಯಲು, ೧೦ ನೇ ನಂಬರ್ ಶಾಲೆ, ಮಹಾಂತೇಶ ಚಿತ್ರಮಂದಿರ, ನಗರಸಭೆ ಕಾರ್ಯಾಲಯ ಮಾರ್ಗವಾಗಿ ಮರಳಿ ಕಂಠಿ ಸರ್ಕಲ್ ಗೆ ತಲುಪಿತು.
ರೋಡ್ ಶೋ ದಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡ ವೆಂಕಟೇಶ್ ಸಾಕಾ,ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಶರಣಪ್ಪ ಆಮದಿಹಾಳ, ವಿಜಯ ಗದ್ದನಕೇರಿ, ಅರುಣ ಬಿಜ್ಜಳ,ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)       ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 


Spread the love

Leave a Comment

error: Content is protected !!