ಯಲ್ಲಮ್ಮನ ದರ್ಶನ ಪಡೆದ ಸಂಯುಕ್ತಾ ಪಾಟೀಲ ದಂಪತಿ
ಬಾಗಲಕೋಟ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ದಂಪತಿ ಇಂದು ಸೋಮವಾರದಂದು ಸವದತ್ತಿ ಯಲ್ಲಮ್ಮ ದೇವಿಯ ದರ್ಶನವನ್ನು ಪಡೆದರು.
ನಾಡಿನ ಶಕ್ತಿ ದೇವತೆ ಎಂದೇ ಹೆಸರುವಾಸಿಯಾದ ಸವದತ್ತಿ ಯಲ್ಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿರು. ಈ ಸಮಯದಲ್ಲಿ ಮುಖಂಡರು ಇದ್ದರು.