Selection of office bearers of Hunagunda Ilakal Taluk of State Health Department Nurses Employees Association ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಾಧಿಕಾರಿಗಳ ನೌಕರರ ಸಂಘದ ಹುನಗುಂದ ಇಳಕಲ್ ತಾಲೂಕಿನ ಪದಾಧಿಕಾರಿಗಳ ಆಯ್ಕೆ
Health Department ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಾಧಿಕಾರಿಗಳ ನೌಕರರ ಸಂಘದ ಹುನಗುಂದ ಇಳಕಲ್ ತಾಲೂಕಿನ ಪದಾಧಿಕಾರಿಗಳ ಆಯ್ಕೆ
ಇಳಕಲ್-ಹುನಗುಂದ ತಾಲೂಕಿನ ಸರಕಾರಿ ಶುಶ್ರೂಷಾಧಿಕಾರಿಗಳ ಸಂಘದ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚಿಗೆ ಜರುಗಿತು. ಬಾಗಲಕೋಟೆ ಜಿಲ್ಲಾ ಸಂಘದ ಅದ್ಯಕ್ಷರಾದ ಶ್ರೀ ಶೇಖರ ಕೋಲಕಾರ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಹಾಗೂ ರ‍್ವಾನುಮತದಿಂದ ಅವಳಿ ತಾಲೂಕಿನ ಅಧ್ಯಕ್ಷರಾಗಿ ಶ್ರೀ ಶರಣಗೌಡ.ಕೊಣ್ಣೂರ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಗೆಯೇ ಉಪಾಧ್ಯಕ್ಷರಾಗಿ ಶ್ರೀ ಮಹಾಂತೇಶ ಹಾಲಕೇರಿ ಗೌರವಾದ್ಯಕ್ಷರಾಗಿ- ಶ್ರೀಮತಿ ಆರ್.ವಿ.ಕುಂಟೋಜಿ ,ಕರ‍್ಯಾದ್ಯಕ್ಷರಾಗಿ- ಶ್ರೀ ಶಿವಶಂಕರ ಕಾಳಗಿ, ಪ್ರಧಾನ ಕರ‍್ಯರ‍್ಶಿಯಾಗಿ- ಶ್ರೀ ನಾಗರಾಜ.ಸಿಂದಗೇರಿ, ಖಜಾಂಚಿಯಾಗಿ-ಶ್ರೀ ಶಶಿಕಾ೦ತ ಮುರನಾಳ,ಸಂಘಟನಾ ಕರ‍್ಯರ‍್ಶಿಯಾಗಿ- ಶ್ರೀ ಪ್ರದೀಪ ಹಡಗಲಿ,ಸಹ ಕರ‍್ಯರ‍್ಶಿಯಾಗಿ ಶ್ರೀ ರವಿ ಜಾಧವ ಹಾಗೂ ಮಾದ್ಯಮ ಸಲಹೆಗಾರರಾಗಿ-ಶ್ರೀ ಕುಮಾರ ತುರಡಗಿ ಸಲಹಾ ಸಮಿತಿ ಸದಸ್ಯರಾಗಿ ಅನಿಲ ಕಂಬದ,ಶಿವಾನ೦ದ ಮೇಟಿ,ಬಸವರಾಜ ಸಜ್ಜನ,ಆನಂದ ಗುಮತಾಜ,ರಾಜಮಹಮದ್ ಬಿಳೇಕುದರಿ,ಶ್ರೀಮತಿ ಭಾರತಿ ಮಾಟೂರ,ಶ್ರೀಮತಿ ಲತಾ ಹಾಗೂ ರಾಘವೇಂದ್ರ ಹೊದ್ಲೂರ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲಾ ಪಧಾದಿಕಾರಿಗಳಿಗೆ ರ‍್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ತಾಲೂಕಿನ ಶುಶ್ರೂಷಾಧಿಕಾರಿಗಳು,ಆಸ್ಪತ್ರೆಯ ಮುಖ್ಯಸ್ಥರು ಹಾಗೂ ರ‍್ಕಾರಿ ನೌಕರರು ಅಭಿನಂದಿಸಿದ್ದಾರೆ.
ಸಭೆಯಲ್ಲಿ ತಾಲೂಕಿನ ಮುಖ್ಯ ವೈದ್ಯಾದಿಕಾರಿಗಳು,ಜಿಲ್ಲಾ ಅಧ್ಯಕ್ಷರಾದ ಶ್ರೀ ಶೇಖರ ಕೋಲಕಾರ,ಜಿಲ್ಲಾ ಕರ‍್ಯರ‍್ಶಿ ಶ್ರೀ ಜಗದೀಶ್ ನಾಲವಾಡದ, ದ್ರಾಕ್ಷಾಯಿನಿ ದುಕ್ಕರವಾಡಿ, ಪ್ರದೀಪ ಮಂಟೂರ, ಶಿವಾನಂದ ಶಿರೋಳ, ಬಾಲು ಚಿತ್ರಗಾರ, ವಾದಿರಾಜ ಅಷ್ಠಪುತ್ರೆ, ಶೀವು ಮಠ, ಶಕುಂತಲಾ ಹುಗ್ಗಿ, ಸುಂದರವ್ವಾ ಬೀರನೂರ ಹಾಗೂ ಆಸ್ಪತ್ರೆಯ ಶುಶ್ರೂಷಾಧಿಕಾರಿಗಳು ಉಪಸ್ಥಿರಿದ್ದರು.