Serial Theft Case ಸರಣಿ ಕಳ್ಳತನ ಪ್ರಕರಣ : ಘಟನಾ ಸ್ಥಳಕ್ಕೆ ಸಿಪಿಐ ಭೇಟಿ ಪರಿಶೀಲನೆ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ 6 ಕಡೆ ಸರಣಿ ಕಳ್ಳತನ ನಡೆದ ಸ್ಥಳಗಳಿಗೆ ಹುನಗುಂದ ಸಿಪಿಐ ಸುನೀಲ ಸವದಿ ಮಂಗಳವಾರ ಸಾಯಂಕಾಲ ಭೇಟಿ ನೀಡಿ ಕಳ್ಳತನ ನಡೆದ ಬಗ್ಗೆ ಅಂಗಡಿಗಳ ಮಾಲೀಕರೊಂದಿಗೆ ವಿಚಾರಿಸಿ ಪರಿಶೀಲನೆಯನ್ನು ನಡೆಸಿದರು.
ಅಂಗಡಿಗಳ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಳ್ಳನನ್ನು ಹಿಡಿಯಲು ಕಾರ್ಯಚರಣೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ನಗರ ಪೋಲಿಸ್ ಸಿಬ್ಬಂದಿಯಾದ ರಜಾಕ ಗುಡದಾರಿ ಮತ್ತು ಸಿಬ್ಬಂದಿ ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)