
Shivaraj Tariwala selected for University Blue ಕರಾಟೆ ಕ್ರೀಡಾಕೂಟದಲ್ಲಿ ಯೂನಿವರ್ಸಿಟಿ ಬ್ಲೂಗೆ ಶಿವರಾಜ ತಾರಿವಾಳ ಆಯ್ಕೆ
ಇತ್ತೀಚಿಗೆ ಭೋಪಾಲ್ ನ ಸೇಜ್ ಯೂನಿವರ್ಸಿಟಿ ಯಲ್ಲಿ ನಡೆದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಅಂತರ ವಲಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಇಳಕಲ್ಲದ ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಶಿವರಾಜ ತಾರಿವಾಳ ಭಾಗವಹಿಸಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.
ಆಯ್ಕೆಯಾದ ವಿದ್ಯಾರ್ಥಿಯನ್ನು ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಚೇರ್ಮನ್ನರು ಹಾಗೂ ಸರ್ವ ಸದಸ್ಯರು,ಪ್ರಾಚಾರ್ಯರು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ಧೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದಿಸಿದ್ದಾರೆ.





