Anjaneya by padayatra ಶ್ರಾವಣ ಮಾಸ : ಪಾದಯಾತ್ರೆ ಮೂಲಕ ಆಂಜನೇಯನಿಗೆ ವಿಶೇಷ ಪೂಜೆ
ಇಳಕಲ್ಲ: ಶ್ರಾವಣ ಮಾಸದ ಪ್ರಯುಕ್ತ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಯತಾಳೇಶ್ವರ ಕಟ್ಟೆಯ
ಯುವಕರು ಇಳಕಲ್ ನಗರದಿಂದ ೫ ಕಿಲೋ ಮೀಟರ್ ದೂರ ಇರುವ ಹೊಸೂರ ಆಂಜನೇಯ ದೇವಸ್ಥಾನದ ಪಾದಯಾತ್ರೆ
ಮೂಲಕ ಸಾಗಿ ಅಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ನಡೆಸಿ ಆಶೀರ್ವಾದವನ್ನು ಪಡೆದುಕೊಂಡರು.
ಪಾದಯಾತ್ರೆಯಲ್ಲಿ ಶರಣಪ್ಪ ಸಜ್ಜನ, ಮಹಾಂತೇಶ ಕುಂಬಾರ, ರವಿ ಕುಂಬಾರ, ಸಂಜಯ್ ಕುಂಬಾರ,
ಹೀಗೆ ೧೫ ಕ್ಕೂ ಹೆಚ್ಚು ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು .