Jatra Mahotsav ಸಂಭ್ರಮದಿಂದ ಜರುಗಿದ ಅಂಕಲಿಮಠದ ಶ್ರೀಗುರು ನಿರುಪಾದೇಶ್ವರ ಜಾತ್ರಾ ಮಹೋತ್ಸವ
ಇಳಕಲ್ : ಸಮೀಪದ ಸುಕ್ಷೇತ್ರ ಅಂಕಲಿಮಠದ ಶ್ರೀಗುರುನಿರುಪಾದೇಶ್ವರ ಜಾತ್ರಾ ಮಹೋತ್ಸವ ಸಾಯಂಕಾಲ 6 ಗಂಟೆಗೆ ಸಡಗರ ಸಂಭ್ರಮದಿಂದ ಜರುಗಿತು.
ಮುಂಜಾನೆ 11 ಗಂಟೆ ಶ್ರೀಗುರು ನಿರುಪಾದೇಶ್ವರರ ಹುಚ್ಚಯ್ಯ ಮಹೋತ್ಸವ ಜರುಗಿತು. ಮಧ್ಯಾಹ್ನ 2 ಗಂಟೆಗೆ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅಕ್ಕಿ ಪಾಯಸ ಪ್ರಸಾದವನ್ನು ಪೂಜ್ಯರು ಉದ್ಘಾಟಿಸಿ ಭಕ್ತರಿಗೆ ನೀಡಿದರು.
ಸಾಯಂಕಾಲ 6 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.