AC ಜಮಖಂಡಿ ನೂತನ ಎಸಿ ಆಗಿ ಶ್ವೇತಾ ಬೀಡಿಕರ್ ಅಧಿಕಾರ ಸ್ವೀಕಾರ
ಬಾಗಲಕೋಟೆ : ಜಮಖಂಡಿ ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಅಧಿಕಾರವನ್ನು ಹಸ್ತಾಂತರಿಸಿದರು.
ಈ ಹಿಂದೆ ಬಾಗಲಕೋಟೆ ಮತ್ತು ವಿಜಯಪೂರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.
ಈ ವೇಳೆ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರು ನೂತನ ಉಪವಿಭಾಗಾಧಿಕಾರಿ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)