Sighting of a bear in the early morning – frightened people ಬೆಳ್ಳಂಬೆಳಿಗ್ಗೆ  ಕರಡಿ ದರ್ಶನ- ಭಯಭೀತರಾದ ಜನರು

WhatsApp Group Join Now
Telegram Group Join Now
Instagram Group Join Now
Spread the love

 

 Sighting of a bear in the early morning - frightened people ಬೆಳ್ಳಂಬೆಳಿಗ್ಗೆ  ಕರಡಿ ದರ್ಶನ- ಭಯಭೀತರಾದ ಜನರು

 

ಬೆಳ್ಳಂಬೆಳಿಗ್ಗೆ  ಕರಡಿ ದರ್ಶನ- ಭಯಭೀತರಾದ ಜನರು

 

ಬಳ್ಳಾರಿ : ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದಲ್ಲಿಂದು ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ- ಭಯಭೀತರಾದ ಜನರುಇಂದು ಬೆಳಿಗ್ಗೆ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಗ್ರಾಮದ ಓಣಿ ಓಣಿಗಳಲ್ಲಿ ದಾಳಿ ಮಾಡಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ.

 Sighting of a bear in the early morning - frightened people ಬೆಳ್ಳಂಬೆಳಿಗ್ಗೆ  ಕರಡಿ ದರ್ಶನ- ಭಯಭೀತರಾದ ಜನರು

ನಂತರ ಗ್ರಾಮದ ಜನರು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿ ಕರಡಿಗಳನ್ನು ಓಡಿಸಲು ಪ್ರಯತ್ನ ಮಾಡಿದರು. ನಂತರ ಎರಡು ಕರಡಿಗಳು ದೂರದ ಗುಡ್ಡದ ಕಡೆಗೆ ಓಡಿ ಹೋಗಿವೆ. ಕಳೆದ ವಾರ ತಾಲ್ಲೂಕಿನ ಜವುಕು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು, ಇಬ್ಬರು ಶಿಕ್ಷಕರು ಕರಡಿ ದಳಿಯಿಂದ ಪಾರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ತಾಲ್ಲೂಕಿನ ವಿವಿಧ ಗ್ರಾಮಗಳಾದ ದೇವಲಾಪುರ, ಮೆಟ್ರಿ,ದೇವಸಮುದ್ರ,ಹಂಪಾದೇವನಹಳ್ಳಿ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಅಧಿಕವಾಗಿದ್ದು, ಅರಣ್ಯ ಇಲಾಖೆ ಬೋನು ಅಳವಡಿಸಿ ಕರಡಿ ಸೆರೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

Leave a Comment

error: Content is protected !!