new born baby ನವಜಾತ ಶಿಶುವನ್ನು ಮುಳ್ಳುಕಂಟಿಯಲ್ಲಿ ಎಸೆದು ಹೋದ ಪಾಪಿಗಳು
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ-ಮೆಳ್ಳಿಗೇರಿ ಮಧ್ಯದಲ್ಲಿ ನವಜಾತ ಶಿಶುವನ್ನು
ಬಿಟ್ಟು ಹೋಗಿರುವ ಘಟನೆ ಗುರುವಾರದಂದು ನಡೆದಿದೆ.
ಹಲಗಲಿ ಗ್ರಾಮದ ಹೊರವಲಯದಲ್ಲಿನ ಯಲ್ಲಮ್ಮದೇವಿ ದೇವಸ್ಥಾನದ ಸಮೀಪದ ಮುಳ್ಳುಕಂಟಿಯಲ್ಲಿ
ಎರಡು ದಿನದ ಹೆಣ್ಣು ಮಗುವನ್ನು ಯಾರೋ ಪಾಪಿಗಳು ಮುಳುಕಂಟಿಯಲ್ಲಿ ಬಿಟ್ಟು ಹೋಗಿದ್ದಾರೆ.
ಗ್ರಾಮದ ಗ್ರಾಮಸ್ಥರ ಕಣ್ಣಿಗೆ ಕಂಡ ಶಿಶುವನ್ನು ಮಹಿಳೆಯರು ಎತ್ತಿಗೊಂಡು ಮಗುವನ್ನು ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಕಳಿಸಿ ಚಿಕಿತ್ಸೆಯನ್ನು ನೀಡಿದ್ದಾರೆ. ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಚಿಕಿತ್ಸೆಯನ್ನು
ನೀಡಿ ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.