Bagalkot ಆರು ಸುಲಿಗೆಕೋರರ ಬಂಧನ: ಒಬ್ಬ ಪರಾರಿ
ಬಾಗಲಕೋಟ ನಗರ ಹೊರವಲಯದ ಸಂಗಮ ಕ್ರಾಸ್ ಬಳಿ ಜನರನ್ನು ದರೋಡೆಗೈಯಲು ಸಿದ್ಧತೆಯಲ್ಲಿದ್ದ 6 ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ಯಾಮ ರತ್ನಾಕರ(೩೨), ಶ್ರೀಧರ ಮಾದರ(೨೬), ಸುರೇಶ ಸುಭಾಸ ಮಾದರ(೨೧) ಸುನೀಲ ಮಾದರ(೨೧), ರಾಹುಲ್ ಮಾದರ(೧೯) ಪ್ರಕಾಶ ಬಗಲೆನ್ನವರ(೪೩) ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಪರಾರಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ