Spandana College ಮಹಿಳಾ ಆರೋಗ್ಯ ಮತ್ತು ಜೀವನಕಲೆ ಬಗ್ಗೆ ಜಾಗೃತಿ
ಇಳಕಲ್: ಇಲ್ಲಿನ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜು ಹಾಗೂ ಪದ್ಮಭೂಷಣ ಮಹಿಳಾ ವಿವಿಧೋದ್ದೇಶಗಳ
ಅಭಿವೃದ್ಧಿ ಸಂಸ್ಥೆ ಇವರ ಸಂಯೋಗದಲ್ಲಿ ಮಹಿಳಾ ಆರೋಗ್ಯ ಮತ್ತು ಜೀವನಕಲೆ ಬಗ್ಗೆ ಜಾಗೃತಿ ಕಾರ್ಯಕ್ರಮ
ಬುಧವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಪದ್ಮಭೂಷಣ ಮಹಿಳಾ ವಿವಿಧೋದ್ದೇಶಗಳ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಬಸಮ್ಮ ಕರ್ಲಿ,
ಉಪಾಧ್ಯಕ್ಷೆ ರೇಖಾ ಇಂದರಗಿ ಖಜಾಂಚಿ ವೈಶಾಲಿ ಘಂಟಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕಿ ಎಸ್ ಎಸ್ ಪಾಟೀಲ ವಹಿಸಿ ಮಾತನಾಡಿ
ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಪೂಜಾರಿ, ಜ್ಯೋತಿ ಎಂ ಉಪನ್ಯಾಸಕಿಯರು ಉಪಸ್ಥಿತರಿದ್ದರು. ಉಪನ್ಯಾಸಕರಾದ
ಲಕ್ಷ್ಮಣ್ ಹಾದಿಮನಿ ಸ್ವಾಗತಿಸಿದರು. ಸಮೀರ್ ಸರ್ಕಾವಸ್ ವಂದಿಸಿದರು, ಪ್ರಕಾಶ್ ನಾಲತವಾಡ ನಿರೂಪಿಸಿದರು.